fbpx

ಕಾಫಿ ಬೋರ್ಡ್ ಸಿಇಓ ಕೊಡಗು ಜಿಲ್ಲೆಗೆ ಭೇಟಿ

ಕೊಡಗು ಜಿಲ್ಲೆಯ ರೊಬೊಷ್ಟ ಕಾಫಿ ಬೆಳೆಗಾರರ ತೋಟಗಳ ಪರಿಸ್ಥಿತಿ ಹಾಗೂ ಕಷ್ಟಗಳನ್ನು ಖುದ್ದಾಗಿ ತೋಟಗಳಿಗೆ ತೆರಳಿ ವೀಕ್ಷಣೆ ಮಾಡಲು ಜಿಲ್ಲೆಗೆ ಆಗಮಿಸಿದ ಕಾಫಿ ಮಂಡಳಿಯ ಸಿ ಇ ಓ ಜಗದೀಶ್

ಕಾಫಿ ಮಂಡಳಿ ಕಾರ್ಯದರ್ಶಿ,ಸಿ.ಇ. ಓ. ಜಗದೀಶ್ (I.A.S) ಅವರು ಅತಿವೃಷ್ಟಿ-ಅಕಾಲಿಕ ಮಳೆಗೆ ರೊಬೊಷ್ಟ ಕಾಫಿ ಬೆಳೆ ನಷ್ಟಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಕೊಡಗು ಜಿಲ್ಲೆಯ ರೊಬೊಷ್ಟ ಕಾಫಿ ಬೆಳೆಗಾರರ ಪರಿಸ್ಥಿತಿಯ ವಾಸ್ತವಾಂಶದ ಬಗ್ಗೆ ಅವಲೋಕನ ಮಾಡಿದರು ಹಾಗೂ ತಮ್ಮ ತಂಡದ ಜೊತೆ ಹಲವಾರು ಬೆಳೆಗಾರರ ತೋಟಗಳಿಗೆ ತೆರಳಿ ಕಾಫಿ ಪಸಲು ಉದುರಿ ನಾಶವಾಗಿರೋದನ್ನು ಕಂಡು ಬೇಸರ ವ್ಯಕ್ತಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು ಹಾಗೂ ಈ ಸಂದರ್ಭ ,ಕೊಡಗು ಬೆಳೆಗಾರ ಒಕ್ಕೂಟದ ಸದಸ್ಯರು, ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಸಂಘಟನೆಯ ಪದಾಧಿಕಾರಿಗಳು,ಕೊಡಗು ಹಿತರಕ್ಷಣಾ ಸಮೀತಿಯವರು, ಬೆಳೆಗಾರರು ಈ ಭಾಗದ ರೈತರು ಬೆಳೆ ನಷ್ಟ ಹಾಗೂ ತೋಟ ನಿರ್ವಹಣೆ ಮಾಡಲು ತಗಲುವ ವೆಚ್ಚ ಹಾಗೂ ರೈತರಿಗೆ ನಷ್ಟವಾಗುತ್ತಿರುವ ಬಗ್ಗೆ ಮತ್ತು ರೈತರಿಗೆ ಸಿಗಬೇಕಾದ ಸಬ್ಸಿಡಿಗಳ ಬಗ್ಗೆ ಬೆಳೆಗಾರರ ಸಂಕಷ್ಟದ ಬಗ್ಗೆ ವಿವರಿಸಿ ವಾಸ್ತವ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು.

error: Content is protected !!