ಕಾಫಿ ಬೋರ್ಡ್ ಉಳಿಸುವಂತೆ ಹುದಿಕೇರಿ – ಶ್ರೀಮಂಗಲ ರೈತರ ಆಗ್ರಹ

ಕಳೆದ 50 ವರ್ಷಗಳಿಂದ ಶ್ರೀಮಂಗಲ ಹುದಿಕೇರಿ ಹೋಬಳಿ ಕಾಫಿ ಬೆಳೆಗಾರರಿಗೆ ಸಹಕಾರಿ ಆಗುತ್ತಿದ್ದ ಕಾಫಿ ಬೋರ್ಡ್ ನ್ನು ಯಾವುದೇ ಮಾಹಿತಿ ಇಲ್ಲದೆ ಮುಚ್ಚಿ ಅರುವತೋಕ್ಲಿಗೆ ಸ್ಥಳಾಂತರಕ್ಕೆ ಮುಂದಾಗಿದ್ದು ಈ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗಿದೆ.
ಕುಟ್ಟ ದಿಂದ ಹುದಿಕೇರಿ ಯ ಎಲ್ಲಾ ಗ್ರಾಮಕ್ಕೆ ಇದು ಕೇಂದ್ರ ಸ್ಥಾನ ಇದಾಗಿದ್ದು ,ಸುಳ್ಳು ನೆಪ ಒಡ್ಡಿ ಇದನ್ನು ಮುಚ್ಚಲು ಹೊರಟಿದ್ದು ಇದು ಸರಿ ಇಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡ ಕೂಡಾ ಇದೆ. ಕೇಂದ್ರ ಸರಕಾರದ ಇಂತಹಾ ಕಚೇರಿ ಯನ್ನು ಮುಚ್ಚುವುದು ನಮಗೆ ಅವಮಾನ. ಇದು ಕಾಫಿ ಬೆಳೆಗಾರ ರ ಸಂಸ್ಥೆ ಅಲ್ಲಿ ಕೆಲಸ ಮಾಡುವ ಜನರಿಗೆ ಅಲ್ಲ. 1942 ರಲ್ಲಿ ಸ್ಥಾಪಿದ ವಾದ ಕಾಫಿ ಮಂಡಳಿಯನ್ನು ಟಿ -ರಬ್ಬರ್ ಮಂಡಳಿಗೆ ಸೇರಿಸಲು ಮುಂದಾಗಿದ್ದು ನಮ್ಮ ಕಾಫಿ ಉದ್ಯಮಕ್ಕೆ ಹಿನ್ನಡೆ ಆಗಲಿದೆ. ಕಾಫಿ ಮಂಡಳಿ ಪ್ರತ್ಯೇಕ ಇದ್ದರೆ ಮಾತ್ರ ಒಳ್ಳೆಯದು. ಬೆಳೆಗಾರರು ಈ ಬಗ್ಗೆ ಚಿಂತನೆ ಮಾಡಬೇಕು.ಈಗಾಗಲೇ ಬಾಳೆಲೆ ವಿರಾಜಪೇಟೆ ಯ ಕಾಫಿ ಬೋರ್ಡ್ ಮುಚ್ಚಿದ್ದು ಕ ಶ್ರೀಮಂಗಲ ದಿಂದ ಕಾಫಿ ಬೋರ್ಡ್ ತೆರವಾದರೆ ನಷ್ಟ ಉಂಟಾಗಲಿದೆ ನಮಗೆ ನಷ್ಟ ಉಂಟಾಗಲಿದ್ದು,ಜಿಲ್ಲಾ ರೈತ ಸಂಘ ಮುಂದೆ ಬರಬೇಕೆಂದು ಆಗ್ರಹಿಸಿದ್ದಾರೆ.