ಕಾಫಿ ಬೆಳೆಗಾರರ 10 ಹೆಚ್. ಪಿ. ವರೆಗಿನ ಪಂಪ್ ಸೆಟ್ ಗೆ ವಿದ್ಯುತ್ ಉಚಿತ: ಮುಖ್ಯಮಂತ್ರಿ ಘೋಷಣೆ

ವಿಧಾನಸಭೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
ಕಾಫಿ ಬೆಳೆಗಾರರ 10 ಹೆಚ್.ಪಿ.ವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಚರ್ಚಿಸಲು ಅವಕಾಶ ಕೋರಿದ ಸಂದರ್ಭ ಚರ್ಚೆಗೆ ಅವಕಾಶ ನೀಡಲಾಗಿತ್ತು.
ಈ ಸಂದರ್ಭ ಶಾಸಕ ರಂಜನ್ ಜೊತೆ ಈ ವಿಚಾರದ ಬಗ್ಗೆ ಚರ್ಚೆಗೆ ಶಾಸಕರಾದ ಸಿ.ಟಿ. ರವಿಯವರು, ಕುಮಾರ ಸ್ವಾಮಿ, ಕೆ.ಜಿ ಬೋಪಯ್ಯರವರು ಮುಂದಾಗಿ ಉಚಿತ ವಿದ್ಯುತ್ ಕಲ್ಪಿಸುವಂತೆ ಒತ್ತಡ ಹೇರಿದರು. ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದರು.