ಕಾಫಿ ಬೆಳೆಗಾರರ ಗಮನಕ್ಕೆ
ಮಡಿಕೇರಿ ಅ.14:-ಕಾಫಿ ಮಂಡಳಿಯಿಂದ ಬಿಡುಗಡೆಯಾಗಿರುವ ವಿವಿಧ ಅರೇಬಿಕಾ ಮತ್ತು ರೋಬಸ್ಟ ತಳಿಗಳ ಕಾಫಿ ಬೀಜದ ಪೂರೈಕೆಗೆ ಅರ್ಜಿ ಆಹ್ವಾನಿಸಲಾಗಿದ್ದು, ನಮೂದಿಸಿದ ಅರ್ಜಿಯೊಂದಿಗೆ ಅರೇಬಿಕಾ ಮತ್ತು ರೋಬಸ್ಟ ಕಾಫಿ ಬೀಜದ ಕೆ.ಜಿ. ಒಂದಕ್ಕೆ ರೂ. 400 ರಂತೆ ಮುಂಗಡ ಹಣವನ್ನು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಡಿಜಿಟಲ್ ಪಾವತಿ ಮೂಲಕ ಸಮೀಪದ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಕಚೇರಿಗಳಲ್ಲಿ ಪಾವತಿಸಿ ನೋಂದಾಯಿಸಿ ಕೊಳ್ಳಬಹುದಾಗಿದೆ. ಅರ್ಜಿಯನ್ನು ನೋಂದಾಯಿಸಲು ನವೆಂಬರ್ 11 ಕೊನೆಯ ದಿನವಾಗಿದೆ ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ