ಕಾಫಿ ನಾಡಿನತ್ತ ಬಂದ ಅಪರೂಪದ ಅತಿಥಿ!

ನೋಡುವಾಗಲೇ ಹೆದರುವಂತಹ ಮೈಮಾಟ, ಸೂಕ್ಷ್ಮ ಕಣ್ಣು, ಬೋಳ ತಲೆ, ಕಟ್ಟುಮಸ್ಥಾದ ಭುಜ ನೋಡಲು ಭಯಾನಕವಾಗಿರುತ್ತವೆ.

ಹೌದು ಇವು ರಣ ಹದ್ದುಗಳು, ಕನಿಷ್ಠ 10 ಕೆಜಿ , ಹಾಕ್ ಇಲ್ಲವೇ ವಲ್ಚರ್ ಎಂದು ಕರೆಸಿಕೊಳ್ಳುವ ಈ ಹಕ್ಕಿಯ ಸಂತತಿ ಬರಡು ಜಾಗದಲ್ಲಿ ಕಂಡುಬರುತ್ತದೆ, ಆದರೆ ಕಾಫಿ ನಾಡಿನತ್ತ ಕಾಲಿಟ್ಟಿದೆ.
ಕೆಲವೊಂದು ವನ್ಯ ಜೀವಿ ಛಾಯಾಗ್ರಾಹಕರ ಕ್ಯಾಮರಾದಲ್ಲಿ ಕುಶಾಲನಗರದ ಸುತ್ತಮುತ್ತಲಿನ ದುಬಾರೆ, ಕಣಿವೆ, ಕೂಡಿಗೆ, ಮಾಲ್ದಾರೆ ಸೇರಿದಂತೆ ಬಯಲು ಪ್ರದೇಶದಲ್ಲಿ ಗೋಚರಿಸಿದೆ.
ಹಕ್ಕಿಗಳು ಆಹಾರ ಅರಸಿ ಬರುವುದು ಸಹಜ, ಆದರೆ ರಣಹದ್ದುಗಳು….. ಅಚ್ಚರಿಯ ಸರಿ!