ಕಾಫಿ ತುಂಬಿದ ಲಾರಿ ಮಗುಚಿ ಲೋಡರ್ ಗಳಿಬ್ಬರ ಸಾವು

ಕೊಡಗು :-ಪೋನ್ನಂಪೇಟೆ ತಾಲೂಕಿನ ಶ್ರೀಮಂಗಲ ಕಾಫಿ ತುಂಬಿದ ಸ್ವರಾಜ್ ಮಜ್ದಾ ಲಾರಿ ಮಗುಚಿ ಕಾಫಿ ಲೋಡರ್’ಗಳಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುದಿಕೇರಿ ಸಮೀಪ ಹೈಸೂಡ್ಲೊರು ಗ್ರಾಮದಲ್ಲಿ ನಡೆದಿದೆ.
ಹುದಿಕೇರಿಯಲ್ಲಿ ವಾಸವಾಗಿದ್ದ ಪಶ್ಚಿಮ ಬಂಗಾಳ ಸಿಲಿಗುರಿಯ ದುಲಾಲ್ (35),ಬಿಮಲ್ (32) ಮೃತಪಟ್ಟ ಲೋಡರ್’ಗಳಾಗಿದ್ದಾರೆ.
ಹೈಸೂಡ್ಲೊರು ಗ್ರಾಮದ ಬೆಳೆಗಾರ ರೋಷನ್ ಅವರಿಂದ ಹುದಿಕೇರಿ ಗ್ರಾಮದ ಕಾಫಿ ವ್ಯಾಪಾರಿ ಬಿಪಿನ್ ಅವರು ಕಾಫಿ ಖರೀದಿಸಿ ಗ್ರಾಮದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಎಡಬದಿಯಲ್ಲಿದ್ದ ಸಣ್ಣ ಗುಂಡಿಗೆ ಲಾರಿಯ ಚಕ್ರ ಸಿಲುಕಿ ಎಡಬದಿಗೆ ಕಾಫಿ ಚೀಲ ಸಹಿತ ಮಗುಚಿಕೊಂಡಿದೆ.
ಲಾರಿಯ ಚೀಲದ ಮೇಲೆ ಕುಳಿತಿದ್ದ ಈ ಇಬ್ಬರು ಕಾರ್ಮಿಕರು ಲಾರಿ ಮತ್ತು ಕಾಫಿ ಚೀಲದ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಲಾರಿಯ ಕ್ಯಾಬಿನ್ ನಲ್ಲಿದ್ದ ಚಾಲಕ, ಇತರ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.ಕ್ರೇನ್ ಬಳಸಿ ಲಾರಿ ತೆರವುಗೊಳಿಸಿ ಮೃತದೇಹ ತೆಗೆಯಲಾಯಿತು.

ಸ್ಥಳಕ್ಕೆ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ಮತ್ತು ಸಿಬ್ಬಂದಿಗಳು ಆಗಮಿಸಿ ಮಹಜರು ನಡೆಸಿದರು.
–