ಕಾನೂನು ವಿದ್ಯಾರ್ಥಿಯ ಕಾರ್ ರೇಸಿಂಗ್ ಗೀಳು : ತೆರೆಮರೆಯಲ್ಲಿ ಸನ್ನದ್ಧನಾಗುತ್ತಿದ್ದಾನೆ ಅಭಿನ್!

ವಿಶೇಷ ವರದಿ:ಗಿರಿಧರ್ ಕೊಂಪುಳೀರ

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಹಾಕಿ ಮತ್ತು ಅಥ್ಲೇಟಿಕ್ಸ್ ಅಷ್ಟೇ ಸೀಮಿತವಾಗಿದ್ದ ಕ್ರೀಡೆಯ ತವರು ಜಿಲ್ಲೆ ಕೊಡಗು ಕ್ರೀಡೆಯ ಒಂದೊಂದು ಹೊಸ ಆಯಾಮಗಳತ್ತ ಯುವ ಸಮೂಹ ಮುಖ ಮಾಡುತ್ತಲೇ ಬಂದಿದೆ.ಒಂದಷ್ಟು ಕ್ರಿಕೆಟ್ ಕಲಿಗಳು,ಮುಖ್ಯವಾಹಿನಿಗೆ ಬಂದಿರುವುದು ಹೊರತುಪಡಿಸಿ ಸಾಹಸಮಯ ಕ್ರೀಡೆಗಳಲ್ಲಿ ಅಂದಿನಿಂದ ಇಂದಿನವರೆಗೂ ಕಾರ್ ರೇಸಿಂಗ್ ನಲ್ಲಿ ಮುಂಚೂಣಿಯಲ್ಲಿರುವುದು ಜಗತ್ ನಂಜಪ್ಪ ರವರ ಹೆಸರು. ಇವರ ಜೊತೆಗೂಡಿ ಒಂದಷ್ಟು ಯುವ ಪ್ರತಿಭೆಗಳು ಆಫ್ ರೋಡ್ ನಿಂದ ಹಿಡಿದು ಆಟೋ ಕ್ರಾಸ್ ಟ್ರಾಕ್ ವರೆಗೂ ರೈಡರ್ ಗಳು ಮತ್ತು ಡ್ರೈವರ್ ಗಳು ತಯಾರಾಗಿ ರಾಜ್ಯ ,ಹೊರರಾಜ್ಯ ಸೇರಿದಂತೆ ಕೆಲವರು ದೇಶದ ಹೊರಗೂ ಹೆಸರು ಮಾಡಿರುವವರೂ ಇದ್ದಾರೆ. ಇಂತಹವರ ಪಟ್ಟಿಗೆ ಮಡಿಕೇರಿ ಪಟ್ಟಣ ಯುವ ಪ್ರತಿಭೆ ಸ್ಟೇರಿಂಗ್ ಹಿಡಿದು ಟ್ರ್ಯಾಕ್ ಗೆ ಇಳಿದ್ದಾನೆ ಕಾನೂನು ಪದವಿ ಮಾಡುತ್ತಿರುವ ಈ ಯುವಕನ ಹೆಸರು ಅಭಿನ್ ಆರ್ ರೈ. ಪ್ರಕೃತಿವಿಕೋಪದಿಂದ ಕೊರೊನಾದವರೆಗೆ ಜಿಲ್ಲೆಯಲ್ಲಿ ಯಾವುದೇ ಆಟೋ ಕ್ರಾಸ್ ಸ್ಪರ್ಭೆಗಳು ಜಿಲ್ಲೆಯಲ್ಲಿ ನಡೆಯುತ್ತಿದ ಕಾರಣ ಮೋಟೋಕ್ರಾಸ್ ನಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಅಭಿನ್ ಅವಕಾಶಕ್ಕೆ ಹುಡುಕುತ್ತಾ ಇರುವ ಸಂದರ್ಭ 2020ರಲ್ಲಿ ಹಂಪಿಯಲ್ಲಿ ನಡೆದ 2000 ಸಿಸಿ ವಿಭಾಗದಲ್ಲಿ ಎರಡೇ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾನೆ.ಇದೇ ಸ್ಪರ್ಧೆಯ ಓಪನ್ ಕ್ಲಾಸ್ ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾನೆ.

ಜೀಪ್ ಕ್ಲಾಸ್ ನಲ್ಲಿ ಮೂರನೇ ಸ್ಥಾನ ಮತ್ತು 2020-2021 ರಲ್ಲಿ ಹಂಪಿಯಲ್ಲಿ 1400 ವಿಭಾಗದಲ್ಲಿ ಎರಡನೇ ಸ್ಥಾನ,ನೋವಿಸ್ ಓಪನ್ ನಲ್ಲಿ ಎರಡನೇ ಸ್ಥಾನ,ಎಸ್ಟೀಂ ಓಪನ್ ನಲ್ಲಿ ಎರಡನೇ ಸ್ಥಾನ ಮತ್ತು ಓಪನ್ ಕ್ಲಾಸ್ ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾನೆ.ಅಂದಹಾಗೆ ಇದು ಅಭಿನ್ ರೈನದ್ದು ಮೊದಲ ಪ್ರಯತ್ನ.

ರೇಸಿಂಗ್ ಗೀಳು: ಅಭಿನ್ ಚಿಕ್ಕದಿಂಲೂ ಕ್ರೀಡಾಸಕ್ತಿಯಿಂದಲೇ ಬೆಳೆದವನು,ಸಧ್ಯಕ್ಕೆ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿನ್ ರೈಗೆ ಸ್ಪೂರ್ತಿಯಾಗಿರುವುದು ಹೆಸರಾಂತ ರೇಸರ್ ಗಳಾದ ಗೌರವ್ ಗಿಲ್ ಮತ್ತು ಡೀನ್ ಮಸ್ಕರೇಹನಸ್. ಪೋಷಕರಾದ ರತ್ನಾಕರ್ ರೈ ಮತ್ತು ನಮಿತಾ ರೈ ರವರ ಸಾಕಷ್ಟು ಬೆಂಬಲ,ಪ್ರೋತ್ಸಾಹದಿಂದ ತನ್ನದೇ ಸಿಲ್ವರ್ ಬಣ್ಣದ ಎಸ್ಟೀಂ ಕಾರಿನಲ್ಲಿ ಯಾವೊಬ್ಬ ತರಬೇತುದಾರನಿಲ್ಲದೆ,ಆರ್ಥಿಕ ಸಹಾಯವಿಲ್ಲದೆ ಒಂದು ರೇಸಿಗೆ 30 ರಿಂದ 40 ಸಾವಿರ ಹಣ ಖರ್ಚು ಮಾಡಿ ಎಲ್ಲಾ ಸಿದ್ದತೆಯೊಂದಿಗೆ ಟ್ರ್ಯಾಗೆ ಇಳಿಯುತ್ತಾನೆ.ಆರಂಭಿಕ ಹಂತದಲ್ಲಿರುವ ಕಾರಣ,ಇನ್ನೂ ಒಂದು ವರ್ಷ ಪರಿಪೂರ್ಣ ರೇಸರ್ ಆಗಲು ಸಮಯ ಬೇಕಾಗಬಹುದೆಂದು ಅಭಿನ್ ತಿಳಿಸುತ್ತಾರೆ. ಅಟೋಮೊಬೈಲ್ ನಲ್ಲಿ ಸಾಕಷ್ಟು ಆಸಕ್ತಿ ಇದ್ದರೂ ಪೋಷಕರ ಮಾತಿಗೆ ಮಣಿದು ಕಾನೂನು ಪದವಿ ಮಾಡುತ್ತಿರುದುದಾಗಿ ಹೇಳುವ ಅಭಿನ್,ಬೆಂಗಳೂರಿನಲ್ಲಿರುವ ಖಾಸಗಿ ಟ್ರಾಕ್ ನಲ್ಲಿ ಈತನ ಪ್ರಾಕ್ಟಿಸ್ ಗೆ ಅನುಕೂಲವಾಗುತ್ತಿದೆ.

ಪಾರ್ಟ್ ಟೈಮ್ ಕೆಲಸ: ಆರ್ಥಿಕವಾಗಿ ಪೋಷಕರಿಂದ ಒಂದಿಷ್ಟು ಸಹಾಯ ಸಿಕ್ಕಿದರೂ,ರೇಸಿಂಗ್,ಓದಿನ ಜೊತೆ ಪಾರ್ಟ್ ಟೈಮ್ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾನೆ.ಐಡಿಯಲ್ ರೇಸಿಂಗ್ ತಂಡದ ಪರ ರೇಸಿಂಗ್ ನಲ್ಲಿ ಖಾಸಗಿಯಾಗಿ ಪಾಲ್ಗೊಳ್ಳುತ್ತಿದ್ದು ಪ್ರಾಯೋಜಕರು,ತರಬೇತುದಾರರ ನಿರೀಕ್ಷೆಯಲ್ಲಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಎಲ್ಲಿ ಆಟೋಕ್ರಾಸ್ ನಡೆಯಲಿ ಅಲ್ಲಿ ಅಭಿನ್ ರೈ ಇರುತ್ತಾನೆ.ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ನಡೆದ ಆಟೋ ಕ್ರಾಸ್ ನಲ್ಲೂ ಪಾಲ್ಗೊಂಡಿದ್ದಾನೆ.ನೋವಿಸ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ.ಬೆಳೆಯುವ ಸಿರಿ ಮೂಳಕೆಯಲ್ಲೇ ಎನ್ನುವಂತೆ,ಇಂತಹಾ ಮಹತ್ವಾಕಾಂಕ್ಷೆ ಇಟ್ಟಕೊಂಡು ಸಾಧನೆ ಮಾಡಲು ಮುಂದಾಗಿರುವ ಅಭಿನ್ ರೈ ನಂತಹಾ ಯುವ ಪ್ರತಿಭೆಗೆ ಸೂಕ್ತ ಪ್ರೋತ್ಸಾಹದ ಅಗತ್ಯ ಇರುವುದಂತೂ ಸತ್ಯ.

error: Content is protected !!