ಕಾಡು ಪ್ರಾಣಿ- ಮನುಷ್ಯ ಸಂಘರ್ಷ ; ಕೊಡಗಿನ ಜನರಿಗೇ ಸಲಹೆ ಕೇಳಿದ ಸಚಿವ

ಕಾಡು ಪ್ರಾಣಿ – ಮನುಷ್ಯನ ಸಂಘರ್ಷ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವರು, ‘ಕಾಡು ಪ್ರಾಣಿಗಳ ಉಪಟಳವನ್ನು ಈಗಾಗಲೇ ಸರಕಾರ ತೆಗೆದುಕೊಂಡಿರುವ ಕ್ರಮಗಳಿಂದ ನಿಯಂತ್ರಿಸಲು ಆಗುತ್ತಿಲ್ಲ. ಬ್ಯಾರಿಕೇಡ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಹಾಕಿ ಆಗಿಲ್ಲ. ಫೆನ್ಸಿಂಗ್, ಬ್ಯಾರಿಕೇಡ್ ಯಾವುದು ಅಷ್ಟು ಪರಿಣಾಮಕಾರಿ ಕ್ರಮ ಎಂದು ರುಜುವಾತು ಆಗಿಲ್ಲ. ಈ ನಿಟ್ಟಿನಲ್ಲಿ ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಯಾವುದಾದರೂ ಹೊಸ ಕ್ರಮಗಳಿದ್ದರೆ ಕೊಡಗಿನ ಜನ ಸಲಹೆ ನೀಡಬೇಕು’ ಎಂದರು.