fbpx

ಕಾಡು ಪ್ರಾಣಿ ದಾಳಿ: ಜೀವಹಾನಿ ಮಾಹಿತಿ ಲಭ್ಯ

ಬೆಂಗಳೂರು:ಕಳೆದ ಎರಡು ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಜೀವಹಾನಿಯ ಪ್ರಕರಣಗಳ ಬಗ್ಗೆ ಪರಿಷತ್ ಅಧಿವೇಶನದಲ್ಲಿ ಸದಸ್ಯೆ ವೀಣಾ ಅಚ್ಚಯ್ ದನಿಎತ್ತಿದ್ದಾರೆ. ಇದಕ್ಕೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ ಅವರು 2019-20 ನೇ ಸಾಲಿನಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ 2019 ರ ಮೇ 3 ರಂದು ವಿರಾಜಪೇಟೆ ತಾಲೂಕಿನ ಕಾಯಿಮನೆ ಗ್ರಾಮದ ಸುಧಾ ಕುಟ್ಟಪ್ಪ, 2019 ರ ನವೆಂಬರ್ 21 ರಂದು ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ಕರಿಯ, ವಿರಾಜಪೇಟೆ ವಿಭಾಗದಲ್ಲಿ 2019 ರ ಆಗಸ್ಟ್ 8 ರಂದು ತಿತಿಮತಿ ವಲಯದ ಚೆನ್ನಯ್ಯನ ಕೋಟೆ ಗ್ರಾಮದ ಮುರುಡಯ್ಯ, 2020 ರ ಮಾರ್ಚ್ 28 ರಂದು ಪೊನ್ನಂಪೇಟೆ ವಲಯ ಕುಮಟೂರು ಗ್ರಾಮದ ರಾಜು, ಮಡಿಕೇರಿ ವಿಭಾಗದಲ್ಲಿ 2019 ರ ಸೆಪ್ಟಂಬರ್ 06 ರಂದು ಕಡಗದಾಳು ಗ್ರಾಮದ ಚೆನ್ನಕೇಶವ ಮತ್ತು 2020 ರ ಫೆಬ್ರವರಿ 07 ರಂದು ಕುಶಾಲನಗರ ವಲಯದ ಕರಡಿಗೋಡು ಗ್ರಾಮದ ಪೆಮ್ಮಯ್ಯ ಅವರ ಜೀವಹಾನಿಯಾಗಿರುತ್ತದೆ.2020-21 ನೇ ಸಾಲಿನಲ್ಲಿ ಆಗಸ್ಟ್ ಅಂತ್ಯದವರೆಗೆ ಮಡಿಕೇರಿ ವಿಭಾಗದಲ್ಲಿ 2020 ರ ಏಪ್ರಿಲ್ 11 ರಂದು ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಗ್ರಾಮದ ಎಂ.ಸಿ.ಲೋಕೇಶ್, 2020ರ ಜೂನ್ 15 ರಂದು ಮಡಿಕೇರಿಯ ಯವಕಪಾಡಿ ಗ್ರಾಮ ಕುಡಿಯರ ಚಿಣ್ಣಪ್ಪ, 2020 ರ ಆಗಸ್ಟ್ 15 ರಂದು ಸೋಮವಾರಪೇಟೆ ಮೊದೂರು ಗ್ರಾಮದ ನೀನಾ ಮುತ್ತಣ್ಣ, ವಿರಾಜಪೇಟೆ ವಿಭಾಗದಲ್ಲಿ 2020 ರ ಜುಲೈ 04 ರಂದು ವಿರಾಜಪೇಟೆ ಬೈಗೋಡು ಕೋಳಿತೋಡುವಿನ ಮಾದ, 2020 ರ ಮೇ 25 ರಂದು ನಾಗರಹೊಳೆ ವಿಭಾಗದ ನೇರಳೆ ಕುಪ್ಪೆ ಹಾಡಿಯ ಜಗದೀಶ್ ಅವರು ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟಿದ್ದಾರೆ ಇಂತಹಾ ದಾಳಿಯಿಂದ ಉಂಟಾಗುವ ಮಾನವ-ಪ್ರಾಣ ಹಾನಿ ಪ್ರಕರಣಗಳಲ್ಲಿ ಸರ್ಕಾರದ ಆದೇಶದ ಅನ್ವಯ 5 ಲಕ್ಷ ರೂ.ಗಳನ್ನು ವಾರಸುದಾರರಿಗೆ ಒದಗಿಸಲಾಗಿದ್ದು ಸರ್ಕಾರದ ಆದೇಶದನ್ವಯ 2020 ರ ಜನವರಿ 07 ರನ್ವಯ ವನ್ಯಪ್ರಾಣಿಗಳಿಂದ ಮೃತಪಟ್ಟಿರುವ ವ್ಯಕ್ತಿಯ ವಾರಸುದಾರರಿಗೆ ಈಗಾಗಲೇ ಪಾವತಿಸಲಾಗುತ್ತಿದ್ದ 5 ಲಕ್ಷ ರೂ.ಗಳ ದಯಾತ್ಮಕ ಧನವನ್ನು 7,50,000 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಅದರಂತೆ ನಿಯಮಾನುಸಾರ ಪರಿಶೀಲಿಸಿ ವಿತರಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.ಅಲ್ಲದೆ ಸರ್ಕಾರದ ಆದೇಶದನ್ವಯ ಮೃತರ ಕುಟುಂಬದ ವಾರಸುದಾರರಿಗೆ 05 ವರ್ಷಗಳವರೆಗೆ 2 ಸಾವಿರ ರೂ.ಗಳ ಮಾಸಾಶನವನ್ನು ಸಹ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ವಿರಾಜಪೇಟೆ ವಿಭಾಗದ ಪೊನ್ನಂಪೇಟೆ ವಲಯ ಕುಮಟೂರು ಗ್ರಾಮದ ರಾಜು ಎಂಬುವವರು 2020ರ ಮಾರ್ಚ್, 28 ರಂದು ಕಾಡೆಮ್ಮೆ ದಾಳಿಯಿಂದ ಮೃತಪಟ್ಟಿರುವ ಪ್ರಕರಣದಲ್ಲಿ ಮೃತ ವ್ಯಕ್ತಿಯ ವಾರಸುದಾರರಿಗೆ ದಯಾತ್ಮ ಧನ ಪಾವತಿಸುವ ಬಗ್ಗೆ ಗೊಂದಲವಿರುವ ಕಾರಣ ಕೆಲವೊಂದು ದಾಖಲಾತಿಗಳನ್ನು ಒದಗಿಸುವಂತೆ ಕೋರಿದ್ದು, ದಾಖಲಾತಿಗಳು ಸ್ವೀಕೃತವಾದ ಕೂಡಲೇ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ
ಇದರೊಂದಿಗೆ ವಿರಾಜಪೇಟೆ ವಲಯ ಕೊಳತ್ತೋಡು ಬೈಗೋಡು ಗ್ರಾಮದ ಮಾದ ಅವರು 2020 ರ ಜುಲೈ 04 ರಂದು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ನಿಯಮಾನುಸಾರ ದಯಾತ್ಮಕ ಧನವನ್ನು ಖಜಾನೆ-2 ತಂತ್ರಾಂಶದ ಮೂಲಕ ಬಿಲ್ ತಯಾರಿಸಿ ಬ್ಯಾಂಕ್ ಖಾತೆಗೆ ಪಾವತಿಸಬೇಕಾಗಿರುತ್ತದೆ. ಆದರೆ ಈ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರು ಕೂಲಿ ಕಾರ್ಮಿಕರಾಗಿದ್ದು ಇವರಿಗೆ ಆಧಾರ್ ಕಾರ್ಡ್ ಹಾಗೂ ಯಾವುದೇ ಬ್ಯಾಂಕ್ ಖಾತೆ ಇಲ್ಲದ ಕಾರಣ ಪ್ರಸ್ತುತ ದಯಾತ್ಮಕ ಧನ ಪಾವತಿಸುವುದು ಬಾಕಿ ಇರುತ್ತದೆ. ಈ ಎರಡು ಪ್ರಕರಣಗಳನ್ನು ಹೊರತುಪಡಿಸಿ ಇನ್ನಿತರ ಪ್ರಕರಣಗಳಲ್ಲಿ ಕೂಡಲೇ ಪರಿಹಾರ ಪಾವತಿ ಮಾಡಲಾಗಿರುತ್ತದೆ ಎಂದು ಸದನದಲ್ಲಿ ಸ್ಪಷ್ಟನೆ ನೀಡಿದ್ದಾರೆ
2019-2020ನೇ ಸಾಲಿಗೆ ಕೊಡಗು ಜಿಲ್ಲೆಗೆ ರೂ.28.549 ಕೋಟಿ ಅನುದಾನ ಅಂದಾಜು ಮೊತ್ತ ಪ್ರಗತಿಯ ಹಂತ, ವಿನಿಯೋಗಿಸಿರುವ ಮೂತ್ತ,ಭೂಕುಸಿತದ ಹಾನಿ ಬಗ್ಗೆಯೂ ಚರ್ಚೆಗೆ ಬಂದಿದೆ.

error: Content is protected !!