ಕಾಡುಹಂದಿ ದಾಳಿಗೆ ಕಾಫಿ ಬೆಳೆಗಾರ ಬಲಿ

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೆಳೆಗಾರರೊಬ್ಬರ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿದ ಘಟನೆ ಸೋಮವಾರಪೇಟೆಯ ಕಿರಗಂದೂರಿನಲ್ಲಿ ನಡೆದಿದೆ.
ತೋಟಕ್ಕೆಂದು ತೆರಳಿದ ವಿನು ಕುಶಾಲಪ್ಪ ಮೃತ ವ್ಯಕ್ತಿ. ತೋಟಕ್ಕೆ ತೆರಳಿದವರು ಮನೆಕಡೆ ಬಾರದಿರುವುದನ್ನು ಕಂಡು ಪತ್ನಿ ಕರೆ ಮಾಡಿದರೂ ಯಾವುದೆ ಉತ್ತರ ಸಿಗದಿದ್ದ ಸಂದರ್ಭ ಸ್ಥಳಕ್ಕೆ ತೆರಳಿದ ವೇಳೆ
ತೊಡೆ ಮತ್ತು ಮೈ ಮೇಲಿನ ಗಂಭೀರ ಗಾಯಗಳು ಕಂಡು ಬಂದಿದ್ದು,ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.