ಕಾಡುಮಾವು ಜಸ್ಟ್ @ 70, ಚರ್ಮೆ 50, ಕಣಿಲೆ 40 ಭರ್ಜರಿ ಮಾರಾಟ

ಸುದ್ದಿ ಸಂತೆ ವಿಶೇಷ ವರದಿ

ಹೌದು,ಅಪರೂಪದಲ್ಲಿ ಅಪರೂಪದ ರುಚಿ,ಒಂದೆರೆಡು ವರ್ಷ ಸಂಗ್ರಹಿಸಿಟ್ಟು ಬಾಯಿ ಚಪ್ಪರಿಸಿಕೊಂಡು ತಿನ್ನಲಾಗುವ ಹುಳಿ ಸಿಹಿ ಮಿಶ್ರಿತ ಈ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.ಲಾಕ್ಡೌನ್ ಸಂದರ್ಭದಲ್ಲೇ ಇವುಗಳು ಮಾರಾಟಕ್ಕೆ ಸಿದ್ದವಾಗಿದ್ದರೂ,ಮಾರಾಟಕ್ಕೆ ಅವಕಾಶವಿರಲಿಲ್ಲ,ಇದೀಗ ಕಳೆದ ಸೋಮವಾರದಿಂದ ಜಿಲ್ಲಾ ಕೇಂದ್ರ ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತ(ಟೋಲ್ ಗೇಟ್) ಸುತ್ತಮುತ್ತ ಗ್ರಾಮಾಂತರ ಪ್ರದೇಶಗಳಿಂದ ಬರುವ ತರಕಾರಿ ಮಾರಾಟಗಾರ ಬಳಿ ರಾಶಿ ರಾಶಿ ಕಂಡುಬರುತ್ತಿದೆ. ಕೊಡಿಗಿನ ಬಹುತೇಕ ಎಲ್ಲಾ ಪ್ರದೇಶದಲ್ಲಿ ಕಂಡು ಬರುವ ಈ ಹಣ್ಣುಗಿಂದ ವಿವಿಧ ಖಾಧ್ಯ ತಯಾರಿಸುವುದು ಇದೆ.

ಉಪ್ಪಿನಲ್ಲಿಟ್ಟು ಮುಂದಿನ ವರ್ಷದ ವರೆಗೂ ಇಟ್ಟುಕೊಳ್ಳುವ ಪರಿಪಾಠವೂ ಇದೆ.ಮಿಡಿ ಸಂದರ್ಭ ಇವುಗಳ ಉಪ್ಪಿನ ಕಾಯಿ ತಯಾರಿಸಿದರೆ,ಹಣ್ಣಿನಿಂದ ತರಾವರಿ ಅಡುಗೆ ಮಾಡಲಾಗುತ್ತದೆ.ಅದರಲ್ಲೂ ಬಿಸಿ ಅನ್ನ,ಗೀರೈಸ್ ಬಿರಿಯಾನಿಗೆ ಕಚ್ಚಂಬರ್ ನಂತೆ ಬಳಕೆಯೂ ಇದೆ ಹೇರಳವಾಗಿ ಸಿಕ್ಕಿದಲ್ಲಿ ಇಲ್ಲವೇ ಅಕ್ಕಪಕ್ಕದವರಿಂದ ಸಂಗ್ರಹಿಸಿ ಮದುವೆಯಂತಹಾ ಸಂದರ್ಭದಲ್ಲೂ ಊಟಕ್ಕೆ ಬಳಸುತ್ತಿದ್ದದ್ದು ಇದೆ. ಇದೀಗ ಕೆ.ಜಿ ಯೊಂದಕ್ಕೆ 70 ರುಪಾಯಿಯಂತೆ ಮಾರುತ್ತಾರೆ,ಬಾಯಿ ರುಚಿಗೆ ಬೇಕು ಆಂದರೆ ಕೇಳಿ ಚೌಕಾಸಿ ಮಾಡಿಕೊಳ್ಳುವುದು ಸಹಜ,ಆದರೂ ಮಡಿಕೇರಿ ಮಳೆಯ ನಡುವೆ ಅವುಗಳು ಸಂಪೂರ್ಣ ಖಾಲಿಯಾಗದಿದ್ದರೂ ಕಷ್ಟ, ಮೊದಲೇ ಸಂಕಷ್ಟದಲ್ಲಿದ್ದಾರೆ ಅವರು ಒಟ್ಟಿನಲ್ಲಿ ಒಂದು ಚೂರು ಮಳೆ ನಿಂತರೆ ಹೋಗಿ ವ್ಯಾಪಾರ ಮಾಡಿಕೊಂಡು ಬನ್ನಿ.

ಇನ್ನು ಮೈ ಬೆಚ್ಚಗೆ ಮಾಡುವ ಕಣಿಲೆ (ವಾಟೆ,ಬಿದಿರು) ಇವರ ಬಳಿ ಸಿಗುತ್ತವೆ ಪ್ಯಾಕೆಟಿಗೆ 50 ರುಪಾಯಿ ಅಷ್ಟೆ,ಚರ್ಮೆ ಸೊಪ್ಪು ಎರಡು ಕಟ್ಟಿಗೆ 50 ರು ಇವುಗಳು ಅಕ್ಕಿ ರೋಟ್ಟಿಯ ಕಾಂಬಿನೇಷನ್, ಆಟಿ ಶುರುವಾಗುವ ಮುನ್ನವೇ ಮರಕೆಸ ಮಾರಾಟಕ್ಕೆ ಬಂದಿದೆ,ಇವಾಗ ತಿಂದರೆ ಕಡಥ ಬರುವುದು, ಒಂದು ವಾರ ಕಳೆದು ಪತ್ರೋಡೆ ಮಾಡಿ ತಿನ್ನಬಹುದು,ಜೂತೆಜೊತೆಯಲ್ಲಿ, ಫ್ಯಾಷನ್ ಫ್ರುಟ್,ಬಟರ್ ಫ್ರುಟ್, ಸ್ಥಳೀಯ ನಿಂಬೆ,ಕಹಿ ಹುಳಿ, ಹೂ ಬಾಳೆ… ಅಬ್ಬಾ ಇವೆಲ್ಲವೂ ದೇಸಿ. ಹೋಗಿ ಒಂದು ರೌಂಡ್ ಬಟ್ ಕೋವಿಡ್ ನಿಯಮ ಕಡ್ಡಾಯ ಪಾಲಿಸಿ.

error: Content is protected !!