fbpx

ಕಾಡುಕನ್ಯೆ…

ಅಂಕಣ: ವನ್ಯ ಅನನ್ಯ

ಗಿರಿಧರ್ ಕೊಂಪುಳೀರಾ

ನಮಸ್ಕಾರ,ಕೈಲುಮುಹೂರ್ತ ಇಲ್ಲವೇ ಕೈಲ್ಪೋದು ಎಂದು ಕರೆಯಲ್ಪಡುವ ನನ್ನ ಶುಭಾಶಯ. ಇದು ಲೇಖಕರ ಮಾತಲ್ಲ,ಕಾಡಿನಲ್ಲೇ ಹುಟ್ಟಿ ಯಾರಿಗೂ ಬೇಡದೆ ಇರುವ ನಾನು ಕೊಡಗಿನ ಜನತೆ ನನ್ನನ್ನು ಕೈಲುಮುಹೂರ್ತ ಸಂದರ್ಭ ನನಗೆ ಸಿಗುವ ಬೆಲೆಯೇ ಬೇರೆ. ಇರಲಿ,ಕೊಡಗಿನ ಜನತೆ ಈ ದಿನವನ್ನು ಪವಿತ್ರ ದಿನ,ರೈತರು ಎತ್ತುಗಳು ಕೃಷಿಪರಿಕರಗಳ ಮೇಲೆ ಪ್ರೀತಿ ನೀಡುವಂತೆ ನನಗೂ ಇಲ್ಲಿ ಬೆಲೆ ಇದೆ. ನಾನು ಯಾರು ಗೂತ್ತಾ.. ?

ನನ್ನನ್ನು ಥೋಕ್ ಪೂ ಎಂದು ಕೊಡವ ಭಾಷೆಯಲ್ಲಿ,ಸ್ಥಳೀಯವಾಗಿ ಕೋವಿ ಹೂವು,ಇಲ್ಲವೇ ಗೌರಿ ಹೂವು ಎಂದು ಗುರುತಿಸಿಕೊಂಡಿರುವ ನಾನು ಕಾಡಿನಲ್ಲಿ ಒಂದು ಬಳ್ಳಿ ಮತ್ತೊಬ್ಬ ಸ್ನೇಹಿತ ಬಳ್ಳಿಯೋ,ಗಿಡವನ್ನೊ ಅವಲಂಭಿಸಿ ಬೆಳೆಯುತ್ತೇನೆ. ಮಲೆನಾಡಿನ ಕಾಫಿ ತೋಟಗಳಲ್ಲಿ ಸಾಮಾನ್ಯವಾಗಿ ಅದರಲ್ಲೂ ಮಳೆಗಾಲದಲ್ಲಿ ನಾನು ದರ್ಶನ ನೀಡುತ್ತೇನೆ.

ಸೆಪ್ಟೆಂಬರ್ 3 ತಾರೀಖು ಹಬ್ಬ ಎಂದು ನಿಗಧಿಯಾದಂತೆ ನನ್ನನ್ನು ಹುಡುಕುವ ಕೆಲಸ ಹೆಣ್ಣುಮಕ್ಕಳಿಗಿರುತ್ತೆ,ಕೈಲು ಮುಹೂರ್ತ ಆಯುಧಗಳ ಪೂಜೆ ಎಂದು ಪರಿಗಣಿಸಿರುವುದರಿಂದ ಅದೇ ದಿನದಲ್ಲಿ ನಾನು ಅರಳಿರುತ್ತೇನೆ,ಮನೆಯ ಅಕ್ಕಪಕ್ಕವಾದರೆ ತೋಟಕ್ಕೆ ತೆರಳಿದ ಮನೆಯ ಗಂಡುಮಕ್ಕಳು ಇಲ್ಲವೇ ಮನೆಯಲ್ಲಿರುವ ಹೆಣ್ಣುಮಕ್ಕಳು ಪೂಜೆಗೆ ಅಣಿ ಮಾಡಿ ಪರಿಕರಗಳನ್ನು ದೇವರ ಬಾಡೆ(ನಡು ಕೋಣೆಯಲ್ಲಿ) ಎಲ್ಲಾ ವ್ಯವಸ್ತೆ ಮಾಡಿ ಇರಿಸಲಾಗಿ ಮುಖ್ಯವಾಗಿ ಕೋವಿಯ ನಳಿಕೆಯಲ್ಲಿ ನನ್ನನ್ನಃ ಸಿಕ್ಕಿಸಿ ಮತ್ತೆ ನನ್ನ ಇತರೆ ಸಹೋದರಿಗಳ ಜೊತೆ ಪೂಜೆ ಮಾಡುತ್ತಾರೆ. ಮಧ್ಯಾಹ್ನದ ನೈವೇದ್ಯ ಬಳಿಕ ಸಂಜೆ ಹೊತ್ತಿಗೆ ನನ್ನ ಕೆಲಸ ಮುಗಿಯುತ್ತೆ.

ನನಗೂ ವೈಜ್ಞಾನಿಕ ಹೆಸರಿದೆ:

ಗ್ಲೋರಿಸಾ ಸುಪರ್ಬಾ,ಗ್ಲೋರಿ ಲಿಲ್ಲಿ,ಫೈರ್ ಫಲ್ವರ್,ಗೌರಿ ಹೂ ಹೀಗೆ ಹಲವುಃ ನಾಮ ದಿಂದ ಕರೆಯಲ್ಪಡಲಾಗುತ್ತದೆ,ಕೋವಿಗಳು ಮತ್ತು ಕೃಷಿಪರಿಕರಗಳ ಪೂಜೆಗೆ ಬಳಸುವ ನನ್ನ ಪೂರ್ವಜ್ಜ ಲಿಲಿಯಾ ಸೀಸ್ ಆಫ್ರಿಕಾ ಮೂಲದವರು ಎನ್ನುತ್ತಾರೆ.ಕೆಲವರು ಅಗ್ನಿಮುಖಿ,ನಿಂಭಾ,ವಿಷಕನ್ಯೆ ಹೀಗೂ ಕರೆಯುವುದಿದೆ. ಬೆಂಕಿಯ ರೀತಿ ಹಳದಿ,ಕೆಂಪು,ಹಸಿರು,ಬಿಳಿ ಮಿಶ್ರಿತ ಹೂವಾಗಿದ್ದು 50-150 ಸೆಂಟಿಮೀಟರ್ ಬೆಳೆಯುತ್ತದೆ.ಆಫ್ರಿಕಾದಲ್ಲಿ ರಾಸಾಯ್ನಿಕ ಬಳಸಿ ಸಭೆ ಸಮಾರಂಭಗಳಲ್ಲಿಯೂ ಬಳಸುವ ಉದಾಹರಣೆ ಇದೆ.

ಗಿರಿಧರ್ ಕೊಂಪುಳೀರಾ
error: Content is protected !!