ಕಾಡಾನೆ ಹಾವಳಿಯಿಂದ ಫಸಲು ನಾಶ

ಭಾಗಮಂಡಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಚೇರಂಗಾಲ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಮಿತಿ ಮೀರಿದ್ದು, ಗಾಮಸ್ಥರು ತತ್ತರಿಸಿ ಹೋಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಮೂರು ಆನೆಗಳು ಬೀಡುಬಿಟ್ಟಿದ್ದು ಕಾಫಿ ,ಬಾಳೆ, ಅಡಿಕೆ, ತೆಂಗು ಫಸಲು ನಾಶ ಮಾಡಿದೆ. ರಾತ್ರಿ ಹಗಲೆನ್ನದೆ ಆನೆಗಳು ಅಡ್ಡಾಡುತ್ತಿದ್ದು ಗ್ರಾಮಸ್ಥರು ಮನೆಯಿಂದ ಹೊರಬರುವುದಕ್ಕೆ ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಿದರೂ, ಮತ್ತೆ ಗ್ರಾಮದತ್ತ ನುಗ್ಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.