ಕಾಡಾನೆ ಹಾವಳಿಯಿಂದ ತತ್ತರಿಸಿದ ಜನ

ಸಿದ್ದಾಪುರ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯಿಂದ ಜನರು ತತ್ತರಿಸಿಹೋಗಿದ್ದಾರೆ.
ಕಾಫಿ ತೋಟಗಳನ್ನೇ ಆವಾಸ ತಾಣವಾಗಿ ಮಾಡಿಕೊಂಡಿರುವ ಆನೆಗಳು ವಂಶಾಭಿವೃದ್ದಿ ಜೊತೆಗೆ ಕೃಷಿ ಫಸಲು ನಾಶ ಮಾಡುತ್ತಿವೆ. ಇದೀಗ ಮನೆಯ ಅಂಗಳಕ್ಕೂ ಪ್ರವೇಶ ಮಾಡಿರುವ ಆನೆಗಳು ಸುತ್ತ ಮುತ್ತ ಹಣ್ಣಿನ ಫಸಲು ಹಾಳು ಮಾಡಿದೆ. ಆರೆಂಜ್ ಕೌಂಟಿ ರೆಸಾರ್ಟ್ ಬಳಿಯ
ಬೋವನ್ ಹಳ್ಳಿ ಎಸ್ಟೇಟ್ ನಲ್ಲಿ ಹಾಕಿರುವ ಆನೆಗಳ ಲದ್ದಿ ಇದಕ್ಕೆ ಸಾಕ್ಷಿ ಹೇಳುತ್ತಿವೆ.