ಕಾಡಾನೆ ದಾಳಿಗೆ ರೆಸಾರ್ಟ್ ಕಾರ್ಮಿಕ ಗಂಭೀರ

ಸಿದ್ಧಾಪುರ: ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ರೆಸಾರ್ಟ್ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆದಿದಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಇಲ್ಲಿ ಆರೆಂಜ್ ಕೌಂಟಿ ರೆಸಾರ್ಟ್ ನ ಕರಡಿಗೋಡು ದ್ವಾರದ ಸೆಕ್ಯೂರಿಟಿ ಗಾರ್ಡ್ ಕೆಲಸ ಮುಗಿಸಿ ತೆರಳುತಾತಿದ್ದ ಪಶ್ಚಿಮಬಂಗಾಲದವರಾದ ಪೌಲೋಸ್ ಎಂಬುವವರ ಮೇಲೆ ಮುಖ್ಯ ರಸ್ತೆಯಲ್ಲೇ ಒಂಟಿ ಸಲಗ ದಾಳಿ ನಡೆಸಿದ್ದು ಪೌಲೋಸ್ ನನ್ನು ಹತ್ತು ಅಡಿ ದೂರಕ್ಕೆ ಎಸೆಯಲ್ಪಟ್ಪಿದೆ.

ಇವರ ಕಾಲು ಸೇರಿದಂತೆ ಬಹುತೇಕ ದೇಹದ ನಜ್ಜುಗುಜ್ಜಾಗಿದ್ದು ಗಂಭೀರ ಸ್ವರೂಪದಲ್ಲಿ ಗಾಯಗೊಂಡು ,ಸಿದ್ದಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

error: Content is protected !!