ಕಾಡಾನೆ ಹಾವಳಿ ಶಾಶ್ವತ ತಡೆಗೆ ಸ್ಥಳದಲ್ಲೇ ಪ್ರತಿಭಟನೆ

|ಅಧಿಕಾರಿಗಳನ್ನು ದಿಗ್ಬಂಧನದಲ್ಲಿರಿಸಿದ ಪ್ರತಿಭಟನಾಕಾರರು|

ಸಿದ್ದಾಪುರ : ಕಾಫಿ ತೋಟವೊಂದರಲ್ಲಿ ಕಾವಲುಗಾರನಾಗಿದ್ದ ಕಾರ್ಮಿಕನ ಮೇಲೆ ಮಧ್ಯರಾತ್ರಿ ಕಾಡಾನೆಯೊಂದು ಹಠಾತ್ ದಾಳಿ ಮಾಡಿದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ ಕಾರ್ಮಿಕ ಸಂದೀಪ್(22) ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಕಾರ್ಮಿಕ ರಾಜ ಪ್ರಾಣ ಪ್ರಾಣಾಪಾಯದಿಂದ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಬಿಬಿಟಿಸಿ ಬೀಟಿಕಾಡು ತೋಟದಲ್ಲಿ ನಡೆದಿದೆ.
ಕಾಫಿ ಕಣದಲ್ಲಿ ಕಾವಲುಗಾರರಾಗಿದ್ದ ಸಂದೀಪ ಹಾಗೂ ರಾಜ
ಮಧ್ಯರಾತ್ರಿ ವೇಳೆ ನಿದ್ರೆಗೆ ಜಾರಿದ ಸಂದರ್ಭ ಕಣದ ಸುತ್ತಲೂ ಅಳವಡಿಸಲಾಗಿದ್ದ ಕಬ್ಬಿಣದ ಮುಳ್ಳು ಬೇಲಿಯನ್ನು ಮುರಿದು ಒಳನುಗ್ಗಿ ಬಂದ ಕಾಡಾನೆ ಮಲಗಿದ್ದವರ ಮೇಲೆ ಹಠಾತ್ತನೆ ದಾಳಿ ಮಾಡಿದೆ.ರಾಜ ಪ್ರಾಣಾಪಾಯದಿಂದ ಪಾರಾದರೆ. ಸಂದೀಪ್ ಮಲಗಿದ್ದಲ್ಲಿಯೇ ಕಾಡಾನೆ ದಾಳಿ ಮಾಡಿ ತಲೆಗೆ ತುಳಿದು ಗಾಯಗೊಳಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಬೆಳಿಗ್ಗೆ ಕಾಡಾನೆ ದಾಳಿ ವಿಷಯ ತಿಳಿದ ಸುತ್ತಮುತ್ತಲ ತೋಟದ ಕಾರ್ಮಿಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಶಾಶ್ವತ ಕಾಡಾನೆ ಹಾವಳಿಯನ್ನು ತಡೆಗಟ್ಟಿ ಕಾರ್ಮಿಕರಿಗೆ ರಕ್ಷಣೆ ನೀಡುವ ಮೂಲಕ ಮೃತ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಬಿಟಿಸಿ ತೋಟದ ವ್ಯವಸ್ಥಾಪಕರನ್ನು ಕೆಲಕಾಲ ದಿಗ್ಬಂಧನದಲ್ಲಿರಿಸಿ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವ್ ಮಾತನಾಡಿ ಕಾಫಿ ತೋಟಗಳಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಹೊಟ್ಟೆಪಾಡಿನ ಜೀವನಕ್ಕಾಗಿ ಕಾಫಿತೋಟಗಳಲ್ಲಿ ದುಡಿಯುವ ಕಾರ್ಮಿಕರು ಜೀವ ಭಯದಲ್ಲಿ ಬದುಕು ಸಾಗಿಸಬೇಕಾಗಿದೆ.ಈ ಹಿಂದೆ ಹಲವು ಮಂದಿ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡು ಹಲವಾರು ಗಂಭೀರ ಗಾಯಗಳಾಗಿ ಮನೆಯಲ್ಲಿ ದಿನ ಕಳೆಯುತ್ತಿದ್ದಾರೆ.ಶಾಶ್ವತ ಯೋಜನೆಗಳನ್ನು ರೂಪಿಸದೆ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಿಬಿಟಿಸಿ ತೋಟದಲ್ಲಿ ಕಾರ್ಮಿಕರು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತೋಟದ ವ್ಯವಸ್ಥಾಪಕರು ಕಾರ್ಮಿಕರಿಗೆ ರಕ್ಷಣೆ ನೀಡದೆ ಅವರ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಅಸಾಯಕತೆ ತೂರಿಸುತ್ತಿರುವುದರ ವಿರುದ್ಧ ಈ ಹಿಂದೆ 4ದಿನಗಳ ಕಾಲ ಪ್ರತಿಭಟನೆ ಮಾಡಲಾಗಿತ್ತು.

ಕಾರ್ಮಿಕರಿಗೆ ಸೂಕ್ತ ರಕ್ಷ ಣೆ ನೆಡದೆ ನಿರ್ಲಕ್ಷ್ಯತನದಿಂದಲೇ ರಾತ್ರಿ ಪಾಳ್ಯದಲ್ಲಿ ಕಾವಲುಗಾರನಾಗಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ತೆಗೆದುಕೊಂಡಿದೆ. ನಿರಂತರವಾಗಿ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿರುವ ಕಾಡುಪ್ರಾಣಿಗಳನ್ನು ತಡೆಗಟ್ಟಿ ಮೃತ ಕುಟುಂಬಕ್ಕೆ 25ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ವಿರಾಜಪೇಟೆ ವಲಯ ಅರಣ್ಯಾಧಿಕಾರಿ ದೇವಯ್ಯ ಪ್ರತಿಭಟನಾಕಾರರನ್ನು ಮನವೊಲಿಸಿ ತಾತ್ಕಾಲಿಕ ಪರಿಹಾರವಾಗಿ 2ಲಕ್ಷದ ಚೆಕ್ ನ್ನು ವಿತರಿಸಿ ಮರಣೋತ್ತರ ವರದಿ ನಂತರ 05.5ಲಕ್ಷ ನೀಡುವುದಾಗಿ ಹೇಳಿದ ಅವರು.

ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸದ್ಯದಲ್ಲೇ ಮುಂದುವರೆಸುವುದಾಗಿ ಭರವಸೆ ನೀಡಿದ ಅವರು ತೋಟ ಕಾರ್ಮಿಕರು. ಶಾಲಾ ಮಕ್ಕಳಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು.

ಬಿಬಿಟಿಸಿ ತೋಟದ ಸಹಾಯಕ ವ್ಯವಸ್ಥಾಪಕರಾದ ಗಣಪತಿ ಹಾಗೂ ಪೊನ್ನಪ್ಪ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಕಾರ್ಮಿಕರ ಬೇಡಿಕೆ ಈಡೇರಿಸುವ ಮೂಲಕ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ 3ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ನಂತರ ಮೃತದೇಹವನ್ನು ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಲಾಯಿತು.

ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಗಣಪತಿ,ಸದಸ್ಯರುಗಳಾದ ಪಳನಿ, ಜಾಫರ್,ಮಾಜಿ ಸದಸ್ಯ ಹುಸೈನ್,ಅಮ್ಮತ್ತಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್, ಸಿಐಟಿಯು ಕಾರ್ಮಿಕ ಸಂಘಟನೆಯ ಪ್ರಮುಖ ರಮೇಶ್ ಸೇರಿದಂತೆ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.
ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್. ಪೊಲೀಸ್ ಬಂದೋಬಸ್ತ್ ಕೈಗೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!