fbpx

ಕಾಡಾನೆಗಳ ದಾಂಧಲೆ:ಅರಣ್ಯ ಇಲಾಖೆ ಹೈರಾಣ

ವರದಿ: ಗಿರಿಧರ್ ಕೊಂಪುಳಿರ

ಕೊಡಗು(ಸಿದ್ದಾಪುರ ): ಕಾಡಾನೆಗಳು ಸೋಲಾರ್ ಬೇಲಿಗಳನ್ನು ಹಾನಿ ಗೊಳಿಸಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆೆ ರಾತ್ರಿ ಸಮಯದಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ 8-10 ಕಾಡಾನೆಗಳು ಕಾಫಿತೋಟದಲ್ಲಿ ಉಪಟಳ ನಡೆಸುತ್ತಿದೆ ಕಾಡಾನೆಗಳು ಕಾಫಿ ತೋಟಕ್ಕೆ ನುಸುಳದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅಳವಡಿಸಿದ್ದ ಸೋಲಾರ್ ಬೇಲಿಯನ್ನು ಹಾನಿಗೊಳಿಸಿ ಅಕ್ಕಪಕ್ಕದ ತೋಟದ ಮನೆಗಳಿಗೂ ನುಗ್ಗಿ ದಾಳಿ ನಡೆಸಿದೆ.

ಒಂದೆಡೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದ್ದರೆ ಇನ್ನೊಂದಡೆೆ ಚದುರಿ ಹೋದ ಹಿಂಡುಗಳು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸಿದರು ಕೂಡ ಮರಳಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದೆ ಇದರಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಸೋಲಾರ್ ಬೇಲಿಯನ್ನು ಹಾನಿಗೊಳಿಸಿದ ಸ್ಥಳಕ್ಕೆ ವಿರಾಜಪೇಟೆ ವಲಯ ಉಪ ವಲಯ ಅಧಿಕಾರಿ ಮನೋಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತಾದರೂ ಅಷ್ಟರಲ್ಲೇ ಮತ್ತೊಂದೆಡೆ ಆನೆಗಳ ದಾಳಿಗಳ ಬಗ್ಗೆ ಕರೆಗಳು ಬರುತ್ತಿದ್ದು ಸಿಬ್ಬಂದಿಕೊರತೆಯಿಂದ ಅರಣ್ಯ ಇಲಾಖೆ ಹೈರಾಣಾಗಿದೆ.

error: Content is protected !!