ಕಾಡಾನೆಗಳ ಜೊತೆ ಚೆಲ್ಲಾಟ: ಯುವಕರು ಅಂದರ್


ತಮಿಳುನಾಡು:ಕಳೆದ ಕೆಲವು ದಿನಗಳಿಂದ ಸಾಕ್ಷಷ್ಟು ವೈರಲ್ ಆಗಿದ್ದ ಕಾಡಾನೆಗಳ ಮೇಲಿನ ಹಿಂಸೆ ಪ್ರಕರಣ ಸೇರಿದಂತೆ,ಅರಣ್ಯ ಇಲಾಖೆ ಕಾನೂನು ಮೀರಿರುವ ಪ್ರಕರಣ ಸಂಬಂಧ ಹಲವು ಯುವಕರನ್ನು ಪೋಲಿಸರು ಬಂಧಿಸಿದ್ದಾರೆ.

ತಮಿಳುನಾಡಿನ ಅಣ್ಣಮಲೈ ಹುಲಿ ರಕ್ಷಿತಾ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮದ ಯುವಕರು ಕಾಡಾನೆಗಳಿಗೆ ಚೇಸ್ಟೆ ಮಾಡುವುದಲ್ಲದೆ,ಅವುಗಳನ್ನು ಕಾಡಿನಲ್ಲಿ ಅಡ್ಡಾದಿಡ್ಡಿ ಓಡುವುದು,ಅದರ ವಿಡಿಯೋವನ್ನು ಮರದ ಮೇಲೆ ಕುಳಿತು ಚಿತ್ರಿಕರಣ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡುವುದನ್ನು ಗಮನಿಸಿದ ಪ್ರಾಣಿ ಪ್ರಿಯರು, ಸೂಕ್ತ ಕ್ರಮಕ್ಕೆ ಪೋಲಿಸ್ ಠಾಣೆಯಲ್ಲಿ ದೂರ5 ದಾಖಲಿಸಿದ್ದರು.

ಹೀಗೆ ಆನೆಗಳಿಗೆ ಹಿಂಸೆ ನೀಡಿದ ಬಳಿಕ ಮರಿ ಆನೆಯೊಂದು ಅಟ್ಟಾಡಿಸಿಕೊಂಡು ಹೋಗುವ ಮತ್ತೊಂದು ವಿಡಿಯೋ ವೈರಲ್ ಆಗುತಿದ್ದಂತೆ ಈ ಕೃತ್ಯದಲ್ಲಿ ಭಾಗಿಯಾದ ಅಷ್ಟು ಯುವಕರನ್ನು ಬಂಧಿಸಲಾಗಿದೆ.

error: Content is protected !!