ಕಾಡಾನೆಗಳ ಕಾಳಗ| ಸಾವನ್ನಪ್ಪಿದ ಸಲಗ!


ಕೊಡಗು:ಜಿಲ್ಲೆಗೆ ಹೊಂದಿಕೊಂಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಬ್ಬೂರು ರೇಂಜಿನ ಚೆನ್ನಂಗಿ ಬೀಟ್ ಬಳಿ ಅಂದಾಜು 35 ರಿಂದ 40 ವರ್ಷದ ಕಾಡಾನೆಯೊಂದು ಮೃತಪಟ್ಟಿದೆ.

ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಅನಂತರಾಮು ಎಂಬುವವರ ಕೆರೆಯ ಬಳಿ ಆನೆಯ ಮೃತದೇಹ ಪತ್ತೆಯಾಗಿದೆ.ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಮತ್ತು ಮಹೇಂದ್ರ ಆನೆಗಳ ಸಹಾಯದಿಂದ ಕಾಡಾನೆಯನ್ನು ಡಾ.ಮುಜೀಬ್ ರೆಹಮಾನ್ ನೇತೃತ್ವದಲ್ಲಿ ಮರಣೋತರ ಪರೀಕ್ಷೆಗೆ ಒಳಪಡಿಸಿದ್ದು ಮತ್ತೊಂದು ಗಂಡಾನೆ ತಿವಿದಿದ್ದರಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದ್ದು ಎಸಿಎಫ್ ಸತೀಶ್ ಮತ್ತು ಉಪ ವಲಯ ಅರಣ್ಯಾಧಿಕಾರಿ ಚೆನ್ನವೀರೇಶ ಗಾಣಿಗೆರ ಸಮ್ಮುಖದಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು.

error: Content is protected !!