ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ

ಕಾಡಾನೆಗಳು ಮತ್ತು ಮಾನವ ಸಂಘರ್ಷ ನಿಯಂತ್ರಿಸುವ ಉದ್ದೇಶದಿಂದ ತಿತಿಮತಿಯಲ್ಲಿ ಅರಣ್ಯ ಇಲಾಖೆಯಿಂದ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ.
ಪಾಲಿಬೆಟ್ಟದ ಅಬ್ಬೂರು ಎನ್ನವಲ್ಲಿ ತಜ್ಞರ ತಂಡ ಬೀಡುಬಿಟ್ಟಿದ್ದು, ದುಬಾರೆ ಮತ್ತು ಮತ್ತಿಗೋಡಿನ ಕ್ಯಾಂಪಿನ ಸಾಕಾನೆಗಳ ಸಹಾಯದಿಂದ ಕಾಡಾನೆಗಳ ಪತ್ತೆ ಕಾರ್ಯ ನಡೆಸಿ ಅರವಳಿಕೆ ನೀಡಿ ಕಾಲರ್ ಅಳವಡಿಸಲಾಗುತ್ತಿದೆ.

ಮೊದಲ ಹಂತದಲ್ಲಿ ಆರು ಕಾಡಾನೆಗಳಿಗೆ ಕಾಲರ್ ಅಳವಡಿಕೆ ಮಾಡಲಾಗುತ್ತಿದೆ. ಎಸಿಎಫ್ ಉತ್ತಪ್ಪ ನೇತೃತ್ವದದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕರ್ನಾಟಕ ಅರಣ್ಯ ಇಲಾಖೆ,ಭಾರತೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆ ಮತ್ತು ಜರ್ಮನಿಯ ಜಿಐಎಲ್ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯ ನಡೆಸಲಾಗುತ್ತಿದೆ.

ಪ್ರಮುಖವಾಗಿ ಪ್ರಮುಖ,ಅಬ್ಬೂರು, ತಾರಿಕಟ್ಟೆ, ಹೊಸಳ್ಳಿ,ದೇವರಪುರ,ಮತ್ತು ಸೋಮವಾರಪೇಟೆಯ ಭಾಗದಲ್ಲಿ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ದುಬಾರೆ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಅಂತ್ಯಗೊಳಿಸಲಾಗಿದೆ.