ಕಾಡನೆ, ವನ್ಯಜೀವಿ ಮಾನವ ಸಂಘರ್ಷ ತಡೆ ಕುರಿತು ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ


ಬೆಂಗಳೂರು, ಮಾ:22. ರಾಜ್ಯದಲ್ಲಿ ಕಾಡನೆ ಸೇರಿದಂತೆ ಇತರೆ ವನ್ಯ ಪ್ರಾಣಿ ಮಾನವ ಸಂಘರ್ಷ ಕುರಿತು ವಿಕಾಸ ಸೌಧದ ಸಭಾಂಗಣದಲ್ಲಿ ಅರಣ್ಯ ,ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವರ ಅದ್ಯಕ್ಷತೆಯಲ್ಲಿ ನಡೆದ ಹಾಸನ,ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಶಾಸಕರುಗಳು, ಹಿರಿಯ ಅರಣ್ಯ ಅಧಿಕಾರಿಗಳ, ಬೆಳೆಗಾರರ ಉನ್ನತ ಮಟ್ಟದ ಸಭೆ ನಡೆಯಿತು.

ಸಭೆಯಲ್ಲಿ ಆನೆ ಮಾನವ ಸಂಘರ್ಷ ನಿಯಂತ್ರಣ ಕ್ಕೆ ಅವಶ್ಯವಾಗಿರುವ ಪರಿಹಾರಗಳ ಕುರಿತು ಚರ್ಚಿಸಲಾಯಿತು. ರಾಜ್ಯದಲ್ಲಿ 2017 ರ ಗಣತಿಯಲ್ಲಿ 6049 ಆನೆಗಳಿದ್ದು ಪ್ರಸ್ತುತ ಗಣತಿ ಕಾರ್ಯ ನಡೆಯುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ಬಾರಿ ಬಜೆಟ್ ನಲ್ಲಿ ಆನೆ ಮಾನವ ಸಂಘರ್ಷ ತಡೆಗೆ ನೂರು ಕೋಟಿ ಮೀಸಲಿರಿಸಿದ್ದು ಇದನ್ನು ಅನುಷ್ಠಾನಕ್ಕೆ ತರಲು ಕ್ರಮ ವಹಿಸುವಂತೆ ಅರಣ್ಯ ಅಧಿಕಾರಿಗಳಿಗೆ ಅರಣ್ಯ ಸಚಿವರು ಸೂಚಿಸಿದರು.ಕೊಡಗಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಶಾಸಕರಾದ ಕೆ.ಜಿ.ಬೋಪಯ್ಯ ನವರು ಜಿಲ್ಲೆಯಲ್ಲಿ ಕಾಡನೆ ಸಮಸ್ಯೆ ಮಿತಿಮೀರಿದ್ದು, ಜಿಲ್ಲೆಯ ಲ್ಲಿ ಅತೀ ಹೆಚ್ಚು ಮಳೆ ಬೀಳುವುದರಿಂದ ಆನೆ ಕಂದಕ ನಿರ್ವಹಣೆ ಕಷ್ಟ ಸಾಧ್ಯ ವಾಗಿದ್ದು ವಾರ್ಷಿಕ ವಾಗಿ ಸೂಕ್ತ ನಿರ್ವಹಣೆ ಮಾಡಿದಲ್ಲಿ ಮಾತ್ರ ಇದು ಅನೆ ನಿಯಂತ್ರಣ ಮಾಡುವುದು ಯಶಸ್ವಿಯಾಗುತ್ತದೆ, ಸೋಲಾರ್ ಬೇಲಿ ವಿಫಲವಾಗಿದೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದರು.

ಶಾಸಕ ಅಪ್ಪಚ್ಚು ರಂಜನ್ ರವರು ಮಾತನಾಡಿ ಅರಣ್ಯದಲ್ಲಿ ಆನೆಗಳಿಗೆ ಆಹಾರದ ಕೊರತೆ ಕಾಡುತ್ತಿದ್ದು ಇದಕ್ಕೆ ಕಾರಣ ತೇಗದ ಮರಗಳ ಪ್ಲಾಂಟೇಷನ್ ಇದರಲ್ಲಿ ಗುಬ್ಬಚ್ಚಿ ಕೂಡ ಗೂಡು ಕಟ್ಟುವುದಿಲ್ಲ ಎಂದರು. ಇದನ್ನು ಕಡಿದು ಆನೆಗಳಿಗೆ ಆಹಾರ ವಾಗುವ ಮರಗಳನ್ನು ಬೆಳೆಯಲು ಕ್ರಮ ವಹಿಸಬೇಕಲ್ಲದೇ ಕ್ರತಕ ಕೆರೆಗಳ ನಿರ್ಮಾಣ ಆಗಬೇಕೆಂದರು. ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷರಾದ ರವಿಕುಶಾಲಪ್ಪ ರವರು ಮಾತನಾಡಿ ಸಕಲೇಶಪುರ ತಾಲೂಕಿನ ನಲ್ಲಿ ಆರು ಹಳ್ಳಿಗಳ ಗ್ರಾಮದಲ್ಲಿ ಕಾಡನೆ ಹಾಗೂ ವನ್ಯಜೀವಿ ಉಪಟಳ ದಿಂದ 2400 ಎಕರೆ ಕ್ರಷಿ ಜಮೀನನ್ನು ಸರ್ಕಾರಕ್ಕೆ ನೀಡಲು ಮುಂದೆ ಬಂದಿದ್ದು ಇದಕ್ಕೆ ಸರಕಾರ ದಿಂದ ಸೂಕ್ತ ಪರಿಹಾರ ನೀಡಿದಲ್ಲಿ ಪುಷ್ಪ ಗಿರಿ- ಕುದುರೆ ಮುಖ ರಕ್ಷಿತ ಅರಣ್ಯ ಜೋಡಣೆ ಮಾಡಿದಂತಾಗುತ್ತದೆ ಅಲ್ಲದೆ ಆನೆಕಾರಿಡಾರ್ ಯೋಜನೆ ಹಾಗೂ ಅರಣ್ಯವನ್ನು ವಿಸ್ತರಿಸಿದಂತಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರಲ್ಲದೆ 230 ಹಾಡಿಗಳಿದ್ದು, ಹಾಡಿ ಜನತೆಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಅವಕಾಶ ಕಲ್ಪಿಸಬೇಕೆಂದರು. ಕೊಡಗಿನಲ್ಲಿ ಈ ಬಗ್ಗೆ ಅರಣ್ಯ ಸಚಿವರು ಸಭೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯನವರು ಅರಣ್ಯ ಸಚಿವರನ್ನು ಆಗ್ರಹಿಸಿದರು. ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಅಧಿವೇಶನ ಮುಗಿದ ಕೂಡಲೇ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ಅರಣ್ಯ ಸಚಿವರು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಎ.ಟಿ ರಾಮಸ್ವಾಮಿ, ಎಂ.ಇ.ಕುಮಾರಸ್ವಾಮಿ, ಹೆಚ್ ಕೆ.ಕುಮಾರ ಸ್ವಾಮಿ, ವಿಧಾನ ಪರಿಷತ್ತು ಸದಸ್ಯರಾದ ಸುಜಾಕುಶಾಲಪ್ಪ, ಪ್ರಾಣೇಶ್, ಸರಕಾರದ ಅಪಾರ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ವನ್ಯಜೀವಿ ಪರಿಪಾಲಕರಾದ ವಿಜಯಕುಮಾರ್ ಗೋಗಿ ಸೇರಿದಂತೆ ರಾಜ್ಯ ಹಿರಿಯ ಅರಣ್ಯ ಅಧಿಕಾರಿಗಳು ಕೊಡಗಿನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಶಂಕರ್,ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಪೂವಯ್ಯ, ವನ್ಯಜೀವಿ ವಿಭಾಗದ ಶಿವರಾಂ ಬಾಬು, ನಾಗರಹೊಳೆಯ ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಕೊಡಗು, ಹಾಸನ, ಚಿಕ್ಕ ಮಗಳೂರಿನ ಬೆಳೆಗಾರ ಸಂಘದ ಪ್ರಮುಖರು ಹಾಜರಿದ್ದರು.

error: Content is protected !!