fbpx

ಕಾಟಿಗಳ ಕಾಟ….

ಕೊಡಗು: ಸುಂಟಿಕೊಪ್ಪದ ನಾರ್ಗಾಣೆ ಗ್ರಾಮದಲ್ಲಿರುವ ಯಂಕನ ಶ್ರೀರಾಮ್ ಎಂಬುವವರಿಗೆ ಸೇರಿದ ತೋಟದಲ್ಲಿ 8 ಕಾಟಿಗಳು (wild bison)ಪ್ರತ್ಯಕ್ಷವಾಗಿ ಆತಂಕ ಮೂಡಿಸಿವೆ. ಕಳೆದ 1 ವಾರದಿಂದ ಬೀಡು ಬಿಟ್ಟಿರುವ ಕಾಟಿಗಳ ಹಿಂಡಿನಿಂದಾಗಿ ತೋಟ ದಲ್ಲಿ ಓಡಾಡಲು ಭಯದ ವಾತಾವರಣ ಸೃಷ್ಟಿಯಾಗಿದ್ದು ತೋಟದ ಕೆಲಸದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ, ಅರಣ್ಯ ಇಲಾಖೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

error: Content is protected !!