ಕಾಂಗ್ರೆಸ್ ವಿರುದ್ಧ ಶಾಸಕದ್ವಯರ ತೀವ್ರ ಆಕ್ರೋಶ

ಆಗಸ್ಟ್ 26ರಂದು ತನ್ನ ಮನೆ ಮುಂದೆ ಬಂದರೆ ನನ್ನ ಮನೆ ನಾಯಿಗಳು ನಿಮ್ಮನ್ನು ಸ್ವಾಗತ ಮಾಡುತ್ತವೆ ಎಂದು ವಿರಾಜಪೇಟೆಯ ಶಾಸಕ ಕೆ.ಜಿ ಬೋಪಯ್ಯ ಗುಟುರು ಹಾಕಿದ್ದಾರೆ.

ಕೊಡಗಿನ ಶಾಸಕರ ಬಗ್ಗೆ ಕಾಂಗ್ರೆಸ್ ನಾಯಕರು ಪೊಲೀಸರ ವಿರುದ್ದ ಪ್ರತಿಭಟನೆ ವೇಳೆ ಅಸಭ್ಯ ಪದ ಬಳಕೆಗೆ ಬೋಪಯ್ಯ ಖಂಡಿಸಿದ್ದು, ಹಾದಿ ಬೀದಿಯಲ್ಲಿ ಹೋಗುವಂತಹ ಕೊಡಗು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಎಂ.ಲಕ್ಷ್ಮಣ್ ಒಬ್ಬ ಹಾದಿ ಬೀದಿಯಲ್ಲಿ ಹೋಗುವವರ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದರು.

ಇತ್ತ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಪ್ರತಿಕ್ರಿಯಿಸಿ ಗುಡ್ಡೆಹೊಸೂರುವಿನ ಮೊಟ್ಟೆ ದಾಳಿ ನಡೆಸಿದ್ದು ಕಾಂಗ್ರೆಸಿನವರು ಎಂದು ಈಗಾಗಲೇ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.ಟಿಪ್ಪು ಜಯಂತಿ ಮೂಲಕ ಹಿಂದುಗಳ ಭಾವನೆ ಕೆರಳಿಸಿತು ಸಿದ್ದರಾಮಯ್ಯ ವಿರುದ್ದ ಪ್ರಜಾಪ್ರಭುತ್ವ ಹಕ್ಕಿನಂತೆ ಬಿಜೆಪಿಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು ಹೊರತು ಮೊಟ್ಟೆ ಎಸೆಯುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದರು.

error: Content is protected !!