ಕಸವೇ ಮೇವು,ರಸ್ತೆಯೇ ಕೊಟ್ಟಿಗೆ: ವಾರಸುದಾರರಿಲ್ಲದ ಗೋವುಗಳನ್ನು ಕೇಳುವವರು ಯಾರು?

ಮಡಿಕೇರಿ ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಆನೆಕಾಡುವಿನಲ್ಲ್ಲಿ ಇತ್ತ್ತೀಚೆಗೆ ವಾಹನವೊಂದು ರಸ್ತೆ ಬದಿಯಲ್ಲಿ ಮಲಗಿದ್ದ ಗೋವುಗಳ ಮೇಲೆ ಹರಿದು ಸಾವು ನೋವು ಸಂಭವಿಸಿತ್ತು. ಇಷ್ಟಾದರೂ ಹೆದ್ದಾರಿಯಲ್ಲಿ ಬಿಡಾಡಿ ಹಸುಗಳ ಕಾಟ ಮಾತ್ರ ವಾಹನ ಸವಾರರಿಗೆ ತಪ್ಪಿಲ್ಲ. ಇರಲಿ ಇದು ರಾಷ್ಟ್ರೀಯ ಹೆದ್ದಾರಿ ಕಥೆಯಾದರೆ, ಕುಶಾಲನಗರ ಪಟ್ಟಣ ಏನು ಇದಕ್ಕೆ ಕಮ್ಮಿ ಇಲ್ಲ ಎನ್ನುವಂತಿದೆ,ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮೂಲಕ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಇಕ್ಕೆಲಗಳಲ್ಲಿ ಬಿಡಾಡಿ ಹಸುಗಳದ್ದೇ ಕಾರುಬಾರಾಗಿದೆ. ರಸ್ತೆ ಮದ್ಯದಲ್ಲೇ ಓಡಾಡುವುದು ಸಾಮಾನ್ಯವಾಗಿದ್ದು ವಾಹನ ಸವಾರರಿಗೆ ಅಡ್ಡಿ ಉಂಟು ಮಾಡುತ್ತಿದ್ದರೆ, ರಾತ್ರಿ ಹೊತ್ತಿನಲ್ಲಿ ಇವುಗಳೇ ಅಪಾಯಕ್ಕೆ ದಾರಿ ಮಾಡಿಕೊಡುತ್ತಿವೆ.

ಇನ್ನು ಇವುಗಳಿಗೆ ಸುತ್ತಮುತ್ತಲು ಎಲ್ಲಿಯೂ ಮೇವು ಸಿಗದ ಹಿನ್ನಲೆಯಲ್ಲಿ,ಹಣ್ಣು ತರಕಾರಿ ತ್ಯಾಜ್ಯ ಸೇರಿದಂತೆ ಪ್ಲಾಸ್ಟಿಕ್,ಪೇಪರ್ ಗಳೇ ಆಹಾರವಾಗಿದೆ. ಕುಶಾಲನಗರ,ಪಟ್ಟಣ ಪಂಚಾಯ್ತಿ ಕಸ ಸಂಗ್ರಹಿಸಲು ಸ್ವಲ್ಪ ತಡವಾದರೂ,ತ್ಯಾಜ್ಯ ಎಲ್ಲವೂ ಈ ಬಿಡಾಡಿ ಹಸುಗಳ ಹೊಟ್ಟೆ ಸೇರುತ್ತದೆ. ಒಟ್ಟಿನಲ್ಲಿ ಕುಶಾಲನಗರ ಪಟ್ಟಣದಿಂದ ಮಡಿಕೇರಿ ವರೆಗಿನ ರಾಷ್ಪ್ರೀಯ ಹೆದ್ದಾರಿಯ ವರೆಗೆ ಕಂಡು ಬರುವ ಬಿಡಾಡಿ ಹಸುಗಳನ್ನು ಪಿಂಜಾರಪೋಲ್ ಇಲ್ಲಾ ಗೋವು ಶಾಲೆಗೆ ವರ್ಗಾಯಿಸುವ ಕೆಲಸ ಸಂಬಂಧ ಪಟ್ಟ ಪಂಚಾಯ್ತಿ ಮಾಡಬೇಕಿದೆ.

error: Content is protected !!