ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ದಾಳಿ: ಮಾಲು ಸಮೇತ ವ್ಯಕ್ತಿ ಬಂಧನ

ಸೋಮವಾರಪೇಟೆಯ ಗೌಡಳ್ಳಿಯಲ್ಲಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಎರಡು ಲೀಟರ್ ಕಳ್ಳಬಟ್ಟಿ,ಡ್ರಂನಲ್ಲಿ ತುಂಬಿದ್ದ 50 ಲೀಟರ್ ಪುಳಿಗಂಜಿಯನ್ನು ವಶಕ್ಕೆ ಪಡೆಯಲಾಗಿದೆ.ಬಂದಿತನನ್ನು ಸುಬ್ರಮಣ್ಯ ಎಂದು ಗುರುತಿಸಿದ್ದು,ಈತ ಮನೆಯಲ್ಲಿ ತಯಾರಿಸಿ ವಾಸನೆ ಬಾರದಂತೆ ತಡೆಯಲು ಮರದ ಬುಡದಲ್ಲಿ ಹೂತಿಡುತ್ತಿದ್ದ.ಅಬಕಾರಿ ಇಲಾಖೆಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು,ಆರೋಪಿ ಸಮೇತ ಮಾಲನ್ನು ಮುಟ್ಟಗೋಲು ಹಾಕಿಕೊಳ್ಳಲಾಗಿದೆ.