ಕಳ್ಳತನ ಆರೋಪದಡಿ ವ್ಯಕ್ತಿಯ ಬಂಧನ

ಕೊಡಗು: ಪರಿಚಯಸ್ತರ ಮನೆಯೊಂದರಲ್ಲಿ 1.48 ಲಕ್ಷ ಮೌಲ್ಯದ 38 ಗ್ರಾಂ ಚಿನ್ನಾಭರಣ ಕಳ್ಳತನ ಆರೋಪದಡಿಯಲ್ಲಿ ಕುಶಾಲನಗರದ ಗಿರೀಶ್ ಎಂಬಾತನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಜೂನ್ 10 ಕುಂಬಾರಗಡಿಯ ಸೋಮಯ್ಯ ಎಂಬುವವರ ತಾಯಿ ಇಟ್ಟಿದ್ದ ಚಿನ್ನವನ್ನು ಹೊಂಚುಹಾಕಿ ಕಳುವು ಮಾಡಿದ್ದ ಗಿರೀಶ್ ವಿರುದ್ದ ಸೂಮಯ್ಯ ದೂರುನೀಡಿದ ಹಿನ್ನಲೆಯಲ್ಲಿ ಪೊಲಿಸರು ತನಿಖೆ ಕೈಗೊಂಡು ಮಾಲು ಸಮೇತ,ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!