fbpx

ಕಳುವು ಪ್ರಕರಣ ಪತ್ತೆ, ದರೋಡೆಕೋರರ ಬಂಧನ

ಕೊಡಗು: ದಿ.07ರಂದು ಅನ್ವರ್ ಹಾಗು ಅವರ ಇಬ್ಬರು ಸ್ನೇಹಿತರು ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ಆಟೋದಲ್ಲಿ ಬಂದ ಐದು ಮಂದಿ ಅಪರೀಚಿತರು ಹೆದರಿಸಿ, ಹಲ್ಲೆ ಮಾಡಿ ಅವರ ಬಳಿದ್ದ ನಗದನ್ನು ಕಳುವು ಮಾಡಿದ್ದರು. ಪ್ರಕರಣ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಪ್ರಕರಣ ಸಂಬಂಧ ಆರೋಪಿಗಳಾದ ಅಸ್ಸಾಂ ಮೂಲದ ಬಿ.ಅಬ್ದುಲ್, ಜಲೀಲ್, ಎ.ಎಸ್.ಅನೀಸ್, ಪಿ.ಕೆ ಸಂಜು, ಕೆ.ರಮ್ಯ ಎಙಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2ಆಟೋಗಳು, 4. ಮೊಬೈಲ್, 31,000ರೂ. ನಗದು, ಚಾಕು ಹಾಗು ಒಂದು ಎಟಿಎಂ ಕಾಡ್೯ ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಅಧೀಕ್ಷಕರಾದ ಎಂ.ಎ ಅಯ್ಯಪ್ಪ ಅವರ ನೇತೃತ್ವದಲ್ಲಿ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ನಿರಂಜನ್ ರಾಜೆ ಅರಸ್, ವಿರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್‌ ಶಿವರುದ್ರ, ಪಿಎಸ್ ಐ ಸಿ.ವಿ ಶ್ರೀಧರ್, ಮುತ್ತಣ್ಣ ಮತ್ತು ಸಿಬ್ಬಂದಿಗಳಾದ ನಾಣಯ್ಯ, ರವಿ, ಸತೀಶ್, ಜೋಶ್ ನಿಶಾಂತ್, ಗೀತಾ, ಗಿರೀಶ್, ಮುಂತಾದವರನ್ನು ಒಳಗೊಂಡಂತಹ ಆರಕ್ಷಕರ ತಂಡ ಪ್ರಕರಣವನ್ನು 24 ಗಂಟೆಗಳ ಒಳಗೆ ಪತ್ತೆ ಮಾಡಲು ಯಶಸ್ವಿಯಾಗಿದ್ದು, ಜನ ಸಾಮಾನ್ಯರಿಂದ ಪ್ರಶಂಸೆ ವ್ಯಕ್ತವಾಗಿದೆ.

error: Content is protected !!