fbpx

ಕಳವು ಪ್ರಕರಣ-ಪುತ್ತೂರಿನ ಇಬ್ಬರ ಬಂಧನ

ಕೊಡಗುಃ ಕಟ್ಟಡದ ಸೆಂಟ್ರಿಂಗ್ ಕೆಲಸಕ್ಕೆ ಬಳಸುವ ಕಬ್ಬಿಣದ ಕಳವು ಪ್ರಕರಣಕ್ಕೆ ಸಂಬಂಧ ದಕ್ಷಿಣ ಕನ್ನಡದ ಪುತ್ತೂರಿನ ಇಬ್ಬರನ್ನು ವಿರಾಜಪೇಟೆ ಗ್ರಾಮಾಂತರ ಪೋಲಿಸರು ಬಂಧಿಸಿದ್ದಾರೆ.ಪುತ್ತೂರಿನ ಆಲಂಗಾರ್ ಗ್ರಾಮದ ನಿವಾಸಿ ಉಮೇಶ್ ಪೂಜಾರಿ ಮತ್ತು ರಾಮಪುಂಜ ಗ್ರಾಮದ ರವಿ ಪೂಜಾರಿ ಬಂದಿತರಾಗಿದ್ದು,ಕಟ್ಟಡ ಗುತ್ತಿಗೆ ಪಡೆದು ಅಮ್ಮತ್ತಿ ಕಾವಾಡಿ ಗ್ರಾಮದಲ್ಲಿ ಮನೆಗೆ ಬಳಸುವ ಸೆಂಟ್ರಿಂಗ್ ತಂದಿರಿಸಲಾಗಿತ್ತು,2019ರ ನವೆಂಬರ್ ನಲ್ಲಿ 100 ಹಲಗೆಗಳ ನಾಪತ್ತೆ ಮತ್ತು ಅದೇ ಗ್ರಾಮದಲ್ಲಿ ಜನವರಿಯಂದು 60 ಹಲಗೆ ನಾಪತ್ತೆಯಾಗಿದವು,ಬಳಿಕ ಕಳೆದ ಅಕ್ಟೋಬರ್ ನಲ್ಲಿ ಮರದ ಹಲಗೆ ,85 ಸಾವಿರದ 7.5 ಕಿರ್ಲೋಸ್ಕರ್ ಜನರೇಟರ್ ಕಳವು ಬಗ್ಗೆ ದೂರು ದಾಖಲಾಗಿದ್ದ ಕಾರಣ ತನಿಖೆ ಕೈಗೊಂಡ ವಿರಾಜಪೇಟೆ ಪೋಲಿಸರು ಒಂದು ಪಿಕಪ್ ವಾಹನ ,ಕೆಲವು ಪರಿಕರ ಸಮೇತ ಇಬ್ಬರನ್ನು ಬಂಧಿಸಲಾಗಿದೆ.

error: Content is protected !!