ಕಲಾಸಕ್ತರ ಮನ ತಣಿಸಿದ ನೃತ್ಯ ವೈಭವ-೪



ಮಡಿಕೇರಿ, ಜೂನ್. ೪; ಬಣ್ಣ ಬಣ್ಣದ ಬೆಳಕಿನ ಚಿತ್ತಾರದ ನಡುವೆ ಸಂಗೀತದ ಅಬ್ಬರ., ಪುಟಾಣಿಗಳಿಂದ ಹಿಡಿದು ಮಧ್ಯ ವಯಸ್ಕರವರೆಗಿನವರ ಹೆಜ್ಜೆ ಸಪ್ಪಳ., ಮಕ್ಕಳ., ಪೋಷಕರ ರ್ಯಾಂಪ್ ವಾಕ್., ನೃತ್ಯ ತಾರೆಗಳ ಸಮಾಗಮ., ಶಿಳ್ಳೆ-ಚಪ್ಪಾಳೆಗಳೊಂದಿಗೆ ಬಹುಮಾನ, ಸನ್ಮಾನಗಳ ಸಂಭ್ರಮ.., ಇದು ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆ ವತಿಯಿಂದ ಮಡಿಕೇರಿಯ ಮೈತ್ರಿ ಪೊಲೀಸ್ ಸಮುದಾಯಭವನದಲ್ಲಿ ಏರ್ಪಡಿಸಲಾಗಿದ್ದ ‘ನೃತ್ಯ ವೈಭವ-೪’ ರಾಜ್ಯಮಟ್ಟದ ಗುಂಪು ನೃತ್ಯ ಸ್ಪರ್ಧೆಯ ಚಿತ್ರಣ..
ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಗುಂಪು ನೃತ್ಯ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಒಂಭತ್ತು ತಂಡಗಳು ಭಾಗವಹಿಸಿದ್ದವು. ಈ ಪೈಕಿ ಅತ್ಯುತ್ತಮ ಪ್ರದರ್ಶನದೊಂದಿಗೆ ಮೂಡಬಿದಿರೆ ತಂಡ ಪ್ರಥಮ ಬಹುಮಾನ ಪಡೆದುಕೊಂಡರೆ, ಚಾಮರಾಜನಗರ ಹಾಗೂ ಶಿವಮೊಗ್ಗದ ತಂಡಗಳು ಸಮಾನ ಅಂಕಗಳೊAದಿಗೆ ದ್ವಿತೀಯ ಬಹುಮಾನವನ್ನು ಹಂಚಿಕೊAಡರು. ಪುತ್ತೂರು ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ರ್ಯಾಂಪ್ ವಾಕ್
ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ನೃತ್ಯ ಪಟುಗಳಿಗೆ ರ್ಯಾಂಪ್ ವಾಕ್ ಏರ್ಪಡಿಸಲಾಗಿತ್ತು. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಮಕ್ಕಳು ಹೆಜ್ಜೆ ಹಾಕಿ ತಮ್ಮಲ್ಲಡಗಿರುವ ಪ್ರತಿಭೆಗಳನ್ನು ಹೊರ ಹಾಕಿ ಬಹುಮಾನ ಪಡೆದು ಸಂಭ್ರಮಿಸಿದರು. ಪೋಷಕರು ಕೂಡ ಮಕ್ಕಳಿಗೆ ಸ್ಪೂರ್ತಿ ಎಂಬಂತೆ ತಾವೂ ಕೂಡ ಸಾಂಪ್ರದಾಯಿಕ ಧಿರಿಸು ತೊಟ್ಟು ವೇದಿಕೆಯೇರಿ ಹೆಜ್ಜೆ ಹಾಕಿದರು.
ನೃತ್ಯ ಕಲರವ ಸ್ಪರ್ಧೆಗೆ ಆಗಮಿಸಿದ್ದ ಸ್ಪರ್ಧಿಗಳು ಬಹುಮಾನಕ್ಕಾಗಿ ಹೆಜ್ಜೆ ಹಾಕಿದರೆ, ಇತ್ತ ಕಿಂಗ್ಸ್ ಆಫ್ ಕೂರ್ಗ್ನ ನೃತ್ಯ ಪಟುಗಳು ತಮ್ಮ ಕಲಾ ಪ್ರದಶನ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪುಟಾಣಿಗಳಿಂದ ಹಿಡಿದು ಬಾಲಕ- ಬಾಲಕಿಯರು ನೃತ್ಯ ಪ್ರದರ್ಶನ ನೀಡಿದರು.
ನೃತ್ಯ ತಾರೆಯರ ಸಮಾಗಮ
ಕಾರ್ಯಕ್ರಮದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿಜೇತ ನೃತ್ಯ ಪಟು ರಾಹುಲ್ ರಾವ್, ನೃತ್ಯ ದೇವತೆ ಎಂದೇ ಹೆಸರಾಗಿದ್ದ ಚೈತಾಲಿ, ಪುಟಾಣಿ ನೃತ್ಯ ತಾರೆ ಮಿಥುನ್ ಮುದ್ದಯ್ಯ ಪ್ರಮುಖ ಆಕರ್ಷಣೆಯಾಗಿದ್ದರು.
ಸಭಾಭವನದ ಬೇಡಿಕೆ
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ನೃತ್ಯ ನಿರ್ದೇಶಕ ವಿನೋದ್ ಕರ್ಕೇರ ಮಾತನಾಡಿ; ಜಲ್ಲೆಯಲ್ಲಿ ಬಹಳಷ್ಟು ಮಂದಿ ಕಲಾವಿದರಿದ್ದಾರೆ. ಆದರೆ, ಕಲಾ ಪ್ರದರ್ಶನ ಮಾಡಲು ಎಲ್ಲಯೂ ಸೂಕ್ತವಾದ ಸಭಾಭವನ(ಆಡಿಟೋರಿಯಂ) ಇಲ್ಲ. ಸಂಬAಧಿಸಿದವರು ಇತ್ತ ಗಮನ ಹರಿಸಿ ಸಭಾಭವನ ಒದಗಿಸಿಕೊಡುವಂತೆ ಬೇಡಿಕೆಯಿಟ್ಟರು.
ಚಲನ ಚಿತ್ರ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಹಾಗೂ ಯಶೋದ ದಂಪತಿಯರು ನೃತ್ಯ ಪಟುಗಳಿಗೆ ಶುಭ ಹಾರೈಸಿದರಲ್ಲದೆ, ರಾಜ್ಯ, ರಾಷ್ಟçಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆಗೆ ಸದಾ ಸಹಕಾರ ನೀಡುವದಾಗಿ ಹೇಳಿದರು. ಜಿಲ್ಲಾ ಪಂಚಾಯ್ತಿ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಮೂಟೇರ ಪುಷ್ಪಾವತಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಕಡ್ಲೇರ ತುಳಸಿ ಮೋಹನ್, ಉದ್ಯಮಿ ಸವಿತಾ ಅರುಣ್, ಪತ್ರಕರ್ತ ಕುಡೆಕಲ್ ಸಂತೋಷ್, ವಕೀಲ ರಂಜಿತ್, ಪ್ರಾಧ್ಯಾಪಕಿ ನಮ್ರೀನ್ ಆಸೀಫ್ ಸೇರಿದಂತೆ ಇತರರು ಅತಿಥಿಗಳಾಗಿ ಪಾಲ್ಗೊಂಡು ಬಹುಮಾನ ವಿತರಣೆ ಮಾಡಿದರು.
ಸನ್ಮಾನದ ಸಂಭ್ರಮ
ಇದೇ ಸಂದರ್ಭದಲ್ಲಿ ಕಿಂಗ್ಸ್ ಸಂಸ್ಥೆಯ ಎಲ್ಲ ವದ್ಯಾರ್ಥಿಗಳನ್ನು ಹಾರ, ಶಾಲು ಹೊದೆಸಿ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಮುಖ್ಯಸ್ಥ ಮಹೇಶ್ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮವನ್ನು ನಿರೂಪಕಿ ಅಕ್ಷತಾ ರೈ ನಿರ್ವಹಣೆ ಮಾಡಿದರು. ಕಿರಣ್, ಮೋಕ್ಷಿತ್, ಅಭಿ, ಚಿತ್ರ, ತೇಜು, ಪ್ರೇರಣ, ಯಶವಂತ್, ಶ್ರುತಿಕ್, ಗುರು ಸೇರಿದಂತೆ ಸಂಸ್ಥೆಯ ಇತರ ಪೋಷಕರು ಸಹಕರಿಸಿದರು.