ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಗೆ ಆನ್ ಲೈನ್ ಮೂಲಕ ನೋಂದಣಿಗೆ ಆಹ್ವಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಗೆ ಕಲಾವಿದರಿಂದ ಆನ್‍ಲೈನ್ ಮೂಲಕ ನೋಂದಾವಣೆ ಮಾಡುವ ಬಗ್ಗೆ, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತಿಗಳು, ಕಲಾವಿದರ ದತ್ತಾಂಶ ಸಂಗ್ರಹ ನೊಂದಣಿಯನ್ನು ಮಾನ್ಯ ಸಚಿವರು ಮಾಚ್೯ 31ರಂದು ಲೋಕಾರ್ಪಣೆಗೊಳಿಸಿರುತ್ತಾರೆ.

ಪ್ರತಿಬಾರಿಯೂ ಕಲಾವಿರ ಮಾಹಿತಿಯನ್ನು ಪಡೆದುಕೊಳ್ಳಲು ಪರಾವಲಂಬಣೆ ಮಾಡಬೇಕಾಗಿರುತ್ತದೆ. ಈ ಕಲಾವಿದರ ದತ್ತಾಂಶ ಸಂಗ್ರಹದ ಪ್ರಕ್ರಿಯೆಯಿಂದ ನಮ್ಮ ಕಲಾವಿದರ ಸಂಪೂರ್ಣ ಮಾಹಿತಿಯನ್ನು ದತ್ತಾಂಶ ರೂಪದಲ್ಲಿ ಸಂಗ್ರಹ ಮಾಡುವ ಈ ಅಭಿಯಾನ ಒಂದು ಮಹತ್ತರ ಮತ್ತು ಅತ್ಯಂತ ಪ್ರಮುಖವಾದ ಚಟುವಟಿಕೆಯಾಗಿರುತ್ತದೆ. ದತ್ತಾಂಶ ಸಂಗ್ರಹವೂ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳು ಹಾಗೂ ಹೊರದೇಶಿಗಳಿಂದಲೂ ಕಲಾವಿದರು ನಮ್ಮನ್ನು ಸಂಪರ್ಕಿಸಿ ಅವರ ಮಾಹಿತಿಯನ್ನು ನೊಂದಣಿ ಮಾಡಿಕೊಳ್ಳುವ ಸಮಗ್ರವಾದ ಯೋಜನೆ ಇದಾಗಿರುವುರಿಂದ ಇದು ಒಂದು ನಿರಂತರ ಪ್ರಕ್ರಿಯೆಯಾಗಿರುತ್ತದೆ.

ಯೋಜನೆಯಿಂದ ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಕಲಾವಿದರುಗಳು ಆನ್‍ಲೈನ್ ಕೊಂಡಿ ಸೇವಾಸಿಂಧು https://sevasindhu.karnataka.gov.in/ ರ ಮೂಲಕ ಸಾಹಿತಿಗಳು, ಕಲಾವಿದರುಗಳು ತಮ್ಮ ದತ್ತಾಂಶವನ್ನು ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ನಾಡಿನ ಅರೆಭಾಷೆ ಕಲಾವಿದರು/ಸಾಹಿತಿಗಳು ಈ ಯೋಜನೆಯಡಿ ತಮ್ಮ ಸಂಪೂರ್ಣ ವಿವರವನ್ನು ನೋಂದಾಯಿಸಲು ಈ ಮೂಲಕ ಕೋರಲಾಗಿದೆ.

error: Content is protected !!