ಕಲಾಡ್ಚ ಹಬ್ಬಕ್ಕೆ ತೆರೆ

ನಾಪೋಕ್ಲು ಸಮೀಪದ ನೆಲಜಿ ಯಲ್ಲಿ ನೆಲೆಸಿರುವ ಕೊಡಗಿನ ಕುಲದೈವ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು,ಕಾಫಿ,ಕಾಳುಮೆಣಸ್ಸು, ಎಣ್ಣೆ, ಅಕ್ಕಿ ಸೇರಿದಂತೆ 25 ಬಗೆಯ ತಲಾಭಾರ ಸೇವೆಗಳು ನಡೆದವು. ನಂತರ ದೇವಾಲಯದಲ್ಲಿ ಮಹಾಪೂಜೆ, ಎತ್ತುಪೋರಾಟ,ದೇವರ ನೃತ್ಯ ಬಲಿ ನಡೆದವು.ತಂತ್ರಿಗಳಾದ ಸಂತೋಷ್ ಹೆಬ್ಬಾರ್, ಅರ್ಚಕರಾದ ಸುರೇಶ್ ಶರ್ಮ, ರಮೇಶ್ ಶರ್ಮ ಮತ್ತು ಸುದೀರ್ ರವರಿಂದ ಪೂಜೆ ಕೈಂಕರ್ಯ ನಡೆದವು,ಪೂಜೆ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

error: Content is protected !!