ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಘಟಕದಿಂದ ಮುಖ್ಯಮಂತ್ರಿಯ ಭೇಟಿ

10 hp ಪಂಪ್ ಸೆಟ್ಟ್ ಗೆ ಉಚಿತ,ಗುಣಮಟ್ಟದ ವಿದ್ಯುತ್ ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ರೈತ ಸಂಘದ ಕೊಡಗು ಘಟಕದ ಅಧ್ಯಕ್ಷ ಮನು ಸೋಮಯ್ಯ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೊಡಗಿನ ರೈತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಪ್ರಮುಖ ಬೇಡಿಕೆಗಳಾದ,ಸತತವಾಗಿ ಪ್ರಕೃತಿ ವಿಕೋಪದಿಂದ ನಲುಗಿದ ಕೊಡಗಿನ ರೈತರ ಸಂಪೂರ್ಣ ಸಾಲ ಮನ್ನಾ.ಆನೆ,ಹುಲಿ ಮುಂತಾದ ವನ್ಯ ಪ್ರಾಣಿಗಳ ಹಾವಳಿಗೆ ಶಾಸ್ವತ ಪರಿಹಾರ.ಕಾಫಿ,ಕರಿಮೆಣಸು ಮುಂತಾದ ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಬೇಕು.ಕೊಡಗಿನ ರೈತರ ತೋಟದ ತಮ್ಮದೇ ಮರಗಳ ಹಕ್ಕನ್ನು ರೈತರಿಗೇ ನೀಡುವುದು, ರೈತರ ಆರ್ ಟಿ ಸಿ ಗೊಂದಲಕ್ಕೆ ಶಾಶ್ವತ ಪರಿಹಾರ ಸಿಗಬೇಕು.ರೈತರ ಮೇಲೆ ಸುಳ್ಳು ಮೊಕದಮ್ಮೆಯೊಂದಿಗೆ ದೌರ್ಜನ್ಯ ಕಾಯ್ದೆಯ ದುರುಪಯೋಗ ಕೂಡಲೇ ನಿಲ್ಲಬೇಕು..ಇದಕ್ಕೊಂದು ಶಾಶ್ವತ ಪರಿಹಾರ ಆಗಬೇಕು ಎಂದು ಒತ್ತಾಯಿಸಿದರು.

error: Content is protected !!