ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಗುತ್ತಿಗೆದಾರ: ಪಾಸಿಟಿವ್ ವ್ಯಕ್ತಿ ತಪಾಸಣೆ ನಡೆಸದೆ ಬರೀ ಗೈನಲ್ಲಿ ದಾದಿಯರು

ಕೊಡಗು: ಸೋಮವಾರಪೇಟೆಯ ಮಾದಾಪುರ ಸಮೀಪದ ಕುಂಬೂರು ಪೈಸಾರಿಯಲ್ಲಿ ವ್ಯಕ್ತಿಯೊಬ್ಬರಿಗೆ ತೀವ್ರ ಶೀತದಿಂದ ಬಳಲುತ್ತಿದ್ದು ಕೊರೊನಾ ಪಾಸಿಟಿವ್ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ,ಆ ವ್ಯಕ್ತಿಯ ಕೋವಿಡ್ – 19 ಮಾರ್ಗಸೂಚಿಯನುಸಾರ ಆ ಮನೆಯಲ್ಲಿನ ಉಳಿದವರ ಸ್ವ್ಯಾಬ್ ಟೆಸ್ಟ್ ಗೆಂದು ಕುಂಬೂರುವಿನ ದಾದಿ ಗ್ರೀಷ್ಮ ಹಾಗೂ ಮಾದಾಪುರ ಆಸ್ಪತ್ರೆಯ ದಾದಿಯರು ಮತ್ತು ಆಶಾ ಕಾರ್ಯಕರ್ತೆಯರು ಸ್ಥಳಕ್ಕೆ ಹೋಗಿದ್ದ ಸಂದರ್ಭ ಲೈನ್ ಮನೆಯಲ್ಲಿ ಕೆಲಸ ನೀಡಿದ್ದ ಗುತ್ತಿಗೆದಾರ ರವಿ ಎಂಬಾತ ಇವರೊಂದಿಗೆ ವಾಗ್ವಾದ ನಡೆಸಿ, ಸ್ವ್ಯಾಬ್ ಪರೀಕ್ಷೆ ಮಾಡದಂತೆ ತಾಕೀತು ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

ಹಲವು ರೀತಿಯಲ್ಲಿ ಮನವೊಲಿಸಲು ಪ್ರಯ್ನಿಸಿದರೂ ಯಾವುದಕ್ಕೂ ಸ್ಪಂಧಿಸದಿದ್ದ ಪರಿಣಾಮ ಕರ್ತವ್ಯಕ್ಕೆ ಅಡ್ಡಿ ಪಡಿಸಿ ದಾದಿಯರಿಗೆ ಧಮ್ಕಿ ಹಾಕಿದ್ದಾನೆ.ಆ ಪೈಸರಿ ಬಹುತೇಕ ಕಾರ್ಮಿರಿದ್ದು, ಇದರಿಂದ ಆರೋಗ್ಯ ಇಲಾಖೆಯವರು ಉಳಿದವರ ಸ್ವ್ಯಾಬ್ ಪರೀಕ್ಷೆ ಮಾಡಲಾಗದೇ ಖಾಲಿ ಕೈಯಲ್ಲಿ ಹಿಂತಿರುಗಿದ್ದಾರೆ

error: Content is protected !!