ಕರಾವಳಿಯಲ್ಲಿ ಹೈ ಅಲರ್ಟ್: ಎಚ್ಚರಿಕೆ ನೀಡುತ್ತಿರುವ ಕೋಸ್ಟ್ ಗಾರ್ಡ್!

ಇನ್ನೆರೆಡು ದಿನಗಳಲ್ಲಿ ಕರಾವಳಿ ಪ್ರದೇಶದತ್ತ ಬೀಸಲಿರುವ ಚಂಡಮಾರುತದ ಹಿನ್ನಲೆಯಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಗಳು ಸಮುದ್ರಕ್ಕೆ ಇಳಿದು ಮೀನುಗಾರಿಕೆ ತೆರಳಿರುವ ಬೋಟ್ ಗಳನ್ನು ದಡ ಸೇರಲು ಮೈಕ್ ಮೂಲಕ ಎಚ್ಚರಿಕೆ ನೀಡುತ್ತಿದೆ.
ಚಂಡಮಾರುತ ಪರಿಣಾಮ ತೀವ್ರ ರೀತಿಯಲ್ಲಿ ಇರುವ ಹಿನ್ನಲೆಯಲ್ಲಿ ಮೀನುಗಾರರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೇನೆಯ ಹಡಗಿನಲ್ಲಿ ತೆರಳಿ ಹಿಂದಿ,ಇಂಗ್ಲಿಷ್,ತುಳು,ಕನ್ನಡ ಭಾಷೆಗಳಲ್ಲಿ ಅನೌಂಸ್ಮೆಂಟ್ ಕಡೆ ಸೆಳೆಯುವತ್ತ ಸತತ ಪ್ರಯತ್ನ ನಡೆಸುತ್ತಿದಾರೆ. ಮೀನುಗಾರಿಕೆ ತೆರಳಿರುವವರ ಬಳಿ ಮೊಬೈಲ್ ಗಳಿದ್ದಲ್ಲಿ,ಅವುಗಳಿಗೆ ಸಂದೇಶ ರವಾನೆ ಮಾಡಲಾಗುತ್ತಿದೆ.

ಅರಬಿ ಸಮುದ್ರದ ಲಕ್ಷ್ವದೀಪದ ತೌಕೆ ಎನ್ನುವಲ್ಲಿ ಚಂಡಮಾರುತ ಮೇ 16 ರಂದು ಆರಂಭವಾಗಲಿದ್ದು,ಕೇರಳ ಮತ್ತು ರಾಜ್ಯದ ಕರಾವಳಿಗೆ ಭಾರೀ ಅನಾಹುತ ಮಾಡುವ ಎಲ್ಲಾ ಲಕ್ಷಣ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

error: Content is protected !!