fbpx

ಕರಗ ಮಾರ್ಗ

ಕೊಡಗು: ಕಟ್ಟುನಿಟ್ಟಾದ ದಸರಾ ಆಚರಣೆ ಇರುವ ಹಿನ್ನಲೆಯಲ್ಲಿ,ಸಾಂಪ್ರದಾಯಿಕವಾಗಿ ಇಲ್ಲಿವರೆಗೆ ನಡೆದುಕೊಂಡು ಬರುತ್ತಿದ್ದ ಶಕ್ತಿ ದೇವತೆಗಳ ಕರಗದ ನಗರ ಸಂಚಾರ ಅಕ್ಟೋಬರ್ 17 ರಂದು ಪಂಪಿನಕೆರೆಯಿಂದ ಆಯಾ ದೇವಾಲಯ ಸಂಬಂಧಿಸಿದ ಮಂದಿ ಮತ್ತು ಉದ್ಗಾಟನೆಗೆ ಆಗಮಿಸುವ ಅಥಿತಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಪೂಜೆ ಸಲ್ಲಿಸುವ ಕರಗಗಳು ಕೋದಂಡ ರಾಮ ದೇವಾಲಯ,ಚೌಡೇಶ್ವರಿ ದೇವಾಲಯ,ಕನ್ನಿಕಾ ಪರಮೇಶ್ವರಿ ದೇವಾಲಯ ಹಾಗು ಪೇಟೆ ರಾಮಮಂದಿರ ದೇವಾಲಯಕ್ಕೆ ತೆರಳಿ ಆಯಾ ಕರಗಗಳ ದೇವಾಲಯಗಳಿಗೆ ಹಿಂತಿರುಗಲಿದೆ.ಕರಗದೊಂದಿಗೆ ಕೇವಲ 6 ಮಂದಿ ದೇವಾಲಯದ ಸಮಿತಿಯವರು ಮತ್ತು ವಾಲಗದವರು ಮತ್ತು ಕಳಷ ಮೆರವಣಿಗೆಯಲ್ಲಿ ಕೇವಲ 10- 15 ಮಂದಿ ಪಾಲ್ಗೊಳ್ಳಲಿದ್ದಾರೆ. ಈ ಸಂಪೂರ್ಣ ಮೆರವಣಿಗೆ ತೆರೆದ ವಾಹನದಲ್ಲೇ ತೆರಳಲಿದ್ದು ಕೋವಿಡ್ ನಿಯಮ ಪಾಲಿಸುವಂತೆ ಕರೆ ನೀಡಲಾಗಿದೆ.

error: Content is protected !!