fbpx

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸದಸ್ಯರ ಸಮಾಲೋಚನಾ ಸಭೆ ಮತ್ತುಕುವೆಂಪು ಜನ್ಮ ದಿನಾಚರಣೆ

ಮಡಿಕೇರಿ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಾಲೋಚಿಸಲು ದಿನಾಂಕ 29-12-2021ರ ಬುಧವಾರ ಮದ್ಯಾಹ್ನ 03.00 ಗಂಟೆಗೆ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಕ ಸಾ ಪ ದ ಮಡಿಕೇರಿ ತಾಲೂಕು ಸದಸ್ಯರ ಸಭೆ ಕರೆಯಲಾಗಿದೆ. ಸದಸ್ಯರು ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಬೇಕೆಂದು ಕೋರಲಾಗಿದೆ.
ಸಭೆಯಲ್ಲಿ ನೂತನ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮತ್ತು ತಾಲೂಕು ನಿಕಟಪೂರ್ವ ಅಧ್ಯಕ್ಷರಾದ ಕುಡೇಕಲ್ ಸಂತೋಷ್ ರವರು ಉಪಸ್ಥಿತರಿರುತ್ತಾರೆ.

ಅಲ್ಲದೆ, ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿಗೆ ಉಪನ್ಯಾಸಕಿ ಡಿ.ಎಸ್.ಪ್ರತಿಮಾ ರೈ ರವರು ಉಪನ್ಯಾಸ ನೀಡಲಿದ್ದಾರೆ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪಂಚಾಯತಿಯ ಮಾಜಿ‌ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ರವರು ಭಾಗವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!