ಕನಾ೯ಟಕ ಸಕಾ೯ರದಿಂದ ಜನತಾ ಪ್ಯಾಕೇಜ್ 23 ರಂದು ಲಾಕ್ಡೌನ್ ವಿಸ್ತರಣೆ ನಿರ್ಧಾರ ಬಿ.ಎಸ್ ಯಡಿಯೂರಪ್ಪ

ಕೊರೊನಾ ಎರಡನೇ ಅಲೆ ಹಿನ್ನಲೆಯಲ್ಲಿ ವೌವಿಧ ವರ್ಗದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ 1,250 ಕೋಟಿ ಮೊತ್ತದ ಪರಿಹಾರದ ವಿಶೇಷ
ಆರ್ಥಿತಿಕ ನೆರವಿನ ಪ್ಯಾಕೇಜ್ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಕೃಷಿ ವಲಯದವರಿಗೆ ಪ್ರತೀ ಹೆಕ್ಟೇರ್ ಹಾನಿಗೆ 10 ಸಾವಿರ ರು. ಪರಿಹಾರ,ಕಲಾವಿದರಿಗೆ 3 ಸಾವಿರ,
ಸಹಕಾರಿ ಸಂಘಗಳ ಸಾಲ ಮರುಪಾವತಿ ಅವಧಿ ಒಂದು ತಿಂಗಳಿಗೆ ವಿಸ್ತರಣೆಮಾಡಿದ್ದು ಸಕಾ೯ರವೇ ಈ ಅವಧಿಯ ಬಡ್ಡಿಯನ್ನು ಭರಿಸಲಿದೆ.
ಸಾಲ ಮರುಪಾವತಿ ಅವಧಿ ಜುಲೈ ಅಂತ್ಯದವರಿಗೆ ವಿಸ್ತರಣೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ತಿಂಗಳಿಗೆ 10 ಕೆ.ಜಿ. ಅಕ್ಕಿ
ಕಟ್ಟಡ ಕಾಮಿ೯ಕರಿಗೆ 3 ಸಾವಿರ ರು.
ರಿಕ್ಷಾ,ಟ್ಯಾಕ್ಸಿ,ಕ್ಯಾಬ್ ಚಾಲಕರಿಗೆ 3 ಸಾವಿರ,ಅಕ್ಕಸಾಲಿಗರಿಗೆ 2 ಸಾವಿರ,ಮಡಿವಾಳರಿಗೆ 2 ಸಾವಿರ,ಟೈಲರ್ 2 ಸಾವಿರ ನಂತೆ ಘೋಷಣೆ ಮಾಡಲಾಗಿದೆ

ಇನ್ನು ಲಾಕ್ಡೌನ್ ವಿಸ್ಥರಣೆ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಮೇ 23 ರಂದು ನಿಧಾ೯ರ ಕೈಗೊಳ್ಳಲಾಗುವುದು.ಇದೇ ವೇಳೆ ಸಿಲಿಂಡರ್ ಡೆಲಿವರಿ ಬಾಯ್, ಶಿಕ್ಷಕರು, ಲೈನ್ ಮ್ಯಾನ್ ಗಳೂ ಕೋರೋನಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಸಕಾ೯ರದಿಂದ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.ಲಸಿಕೆ ನೀಡುವಾಗ ಇವರಿಗೆ ಆದ್ಯತೆ ನೀಡಲು ಸಕಾ೯ರದ ನಿಧಾ೯ರ ಕೈಗೊಂಡಿದೆ ಎಂದರು.

error: Content is protected !!