ಕಡಾಡಿ ಜನ್ಮ ದಿನದ ಪ್ರಯುಕ್ತ ರೈತ ಮೋರ್ಚಾದಿಂದ ಆಹಾರ ವಿತರಣೆ

ಬೆಳಗಾವಿ: ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರ ಜನ್ಮ ದಿನದ ಪ್ರಯುಕ್ತ ಬೆಳಗಾವಿ ಗ್ರಾಮೀಣ ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ಕೋಶಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನಮಠ ನೇತೃತ್ವದಲ್ಲಿ ಮಂಗಳವಾರ ಖಾನಾಪುರ ತಾಲೂಕಿನಲ್ಲಿ ಬಡವರಿಗೆ ಉಪಹಾರ ಹಾಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು.

ಇಡೀ ವಿಶ್ವವನ್ನೆ ಕಾಡುತ್ತಿರುವ ಕೊರೋನಾ ಹೆಮ್ಮಾರಿಯ ಆರ್ಭಟ ಇನ್ನು ನಿಂತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ ನಿಂದ ಪಾರಾಗಲು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜನರು ಪಾಲನೆ ಮಾಡಿ ಈ ಕೊರೋನಾದ ವಿರುದ್ದ ಹೋರಾಟ ಮಾಡಬೇಕಿದೆ. ಅಲ್ಲದೆ ಜನರು ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್, ಪದೇ ಪದೇ ಸ್ಯಾನಿಟೈಸರ್ ಬಳಕೆ ಮಾಡಿಕೊಂಡು ಜೀವ ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಅಲ್ಲದೆ ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಿ ಪ್ರಧಾನಿ ಮೋದಿ ಅವರ ಶ್ವಚ್ಚ ಭಾರತ ಮಿಷನ್‌ಗೆ ಕೈ ಜೋಡಿಸಬೇಕೆಂದು ಅಲ್ಲಯ್ಯನಮಠ ವಿನಂತಿಸಿಕೊಂಡರು.

ಕೋವಿಡ್ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಣೆ ಮಾಡಿರುವ ಸೆಮಿಲಾಕ್‌ಡೌನ್‌ನಿಂದ ಬಡ ಜನರು ಹಸಿವಿನಿಂದ ಬಳಲಬಾರದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಜನ್ಮ ದಿನದ ಪ್ರಯುಕ್ತ ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಕಕ್ಕೇರಿ,ಬೀಡಿ, ನಂದಗಡ, ಖಾನಾಪುರದ ಸರಕಾರಿ ಆಸ್ಪತ್ರೆ ಮತ್ತು ಮಹಾಲಕ್ಷ್ಮಿ ಕೋವಿಡ್ ಕೇರ್ ಸೆಂಟರಗಳಲ್ಲಿರುವ ರೋಗಿಗಳಿಗೆ ಹಂಚಲು ಆಹಾರದ ಪೊಟ್ಟಣ,ಬಿಸ್ಕೆಟ್ ಮತ್ತು ಮಾಸ್ಕಗಳನ್ನು ಹಾಗೆಯೇ ನಂದಗಡ ಮತ್ತು ಖಾನಾಪುರ ಠಾಣೆಯ ಸಿಬ್ಬಂದಿಗಳಿಗೆ ಕೂಡ ಆಹಾರದ ಪೊಟ್ಟಣಗಳನ್ನು ನೀಡಿದರು.

error: Content is protected !!