fbpx

ಕಂಬನಿ ತರಿಸಲಿದೆ ಈರುಳ್ಳಿ!

ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ, ಈರುಳ್ಳಿ ಬೆಳೆ ನಾಶಕ್ಕೆ ಅದು ಕಾರಣವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆಯ ಇಳುವರಿ ಗಣನೀಯವಾಗಿ ಇಳಿಮುಖವಾಗಿದೆ. ಲಭ್ಯತೆಯೂ ಹಾಗಾಗಿ ಕಡೆಮೆಯಾಗಿದೆ‌. ಹಾಗಾಗಿ 15 ದಿನಗಳಿಂದ ಈರುಳ್ಳಿ ದರ ಹೆಚ್ಚುತ್ತಲೇ ಇದೆ. ರಾಜ್ಯದ 1.52 ಲಕ್ಷ ಹೆಕ್ಟೇರ್ ಜಾಗದಲ್ಲಿ ಬೆಳೆಯಲಾಗುವ ಈರುಳ್ಳಿ ಈ ಬಾರಿ ರೈತ ತಲೆ ಮೇಲೆ ಕೈ ಹೊತ್ತು ಕುಳಿತು ಕಂಗಾಲಾಗುವಂತೆ ಮಾಡಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಈರುಳ್ಳಿ ಬೆಳೆಯ ಸರಬರಾಜಂತೂ ಸ್ಥಗಿತಗೊಂಡು ಬಿಟ್ಟಿದೆ. 35 ರಿಂದ 50 ಶೇಖಡದಷ್ಟು ಈರುಳ್ಳಿ ಬೆಳೆ ನಾಶವಾಗಿದ್ದು, ಮುಂದಿನ ದಿನಗಳಲ್ಲಿ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿ ಆಗುವ ದಟ್ಟ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗುತ್ತಿದೆ.

error: Content is protected !!