fbpx

ಕಂದಾಯ ಅಧಿಕಾರಿ ಅಮಾನತ್ತು ಮಾಡಿ:ಸಚಿವ ಸೋಮಣ್ಣ ಆದೇಶ

ಕೊಡಗು: ಜಂಬೂರು, ಕೆ.ನಿಡುಗಣೆ, ಮದೆನಾಡು ಗ್ರಾಮಗಳಲ್ಲಿ 2018ರ ಮಳೆ ಹಾನಿ ಸಂತ್ರಸ್ಥರಿಗೆ ಮನೆ ವಿತರಣೆ ಸಮಪ೯ಕವಾಗಿ ನಡೆಯಲಿಲ್ಲ ಮತ್ತು ಸಾಕಷ್ಟು ಅವ್ಯವಾಹಾರಗಳನ್ನು
ಈ ಹಿಂದಿನ ಉಪವಿಭಾಗಾಧಿಕಾರಿ ಜವರೇಗೌಡ , ಹಾಗೂ ಹೇಮಂತ್ ಎಂಬುವವರು ನಿಯಮ ಪಾಲಿಸದೇ ಮನೆ ಹಂಚಿಕೆ ಮಾಡಿದ್ದಾರೆ ,ಈ ಬಗ್ಗೆ ಹಲವು ಸಾರ್ವಜನಿಕ ದೂರು ಬಂದಿರುವ ಬಗ್ಗೆ
ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೆಡಿಪಿ ಸಭೆಯಲ್ಲಿ ಪ್ರಸ್ಥಾಪ ಮಾಡಿದ ಹಿನ್ನಲೆಯಲ್ಲಿ
ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಿದೆ ನೈಜ ಹಕ್ಕುದಾರರಿಗೆ ಮೋಸ ಮಾಡಲಾಗಿದೆ.

ಹೀಗಾಗಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಆದೇಶ
ನೀಡಿದರು.ಮೇಲ್ನೋಟಕ್ಕೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಶಾಸಕ ರಂಜನ್ ಆರೋಪಿಸಿದ ಕಂದಾಯಾಧಿಕಾರಿ ಹೇಮಂತ್ ಅವರನ್ನು ಕೂಡಲೇ ಅಮಾನತು ಮಾಡುವಂತೆ ಸಭೆಯಲ್ಲಿ ಆದೇಶಿಸಿದರು.
ಬಳಿಕ ಕಾಮಗಾರಿ ನಡಿಯುತ್ತಿರುವ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!