ಓಟಕ್ಕೂ ಸೈ, ಹಾಕಿಗೂ ಜೈ..!

ಬಾಲ ಪ್ರತಿಭೆಯ ಸಾಧನೆ ನೋಡಿದ್ದಾಯ್ತು, ಇದೀಗ ಕ್ರೀಡಾ ಕಾಶಿಯಲ್ಲಿನ ಮತ್ತೊಂದು ಪ್ರತಿಭೆಯನ್ನು ಪರಿಚಯಿಸ್ತಿನಿ ನೋಡಿ..

ನಮ್ಮ ನೆಲದಲ್ಲಿ ಆಡಿ,ತರಬೇತಿ ಪಡೆದು ಅಂತರಾಷ್ಟ್ರೀಯ ಮಟ್ಟದವರೆಗೆ ಮಟ್ಟದವರೆಗೆ ತಲುಪಿರುವ ಕ್ರೀಡಾಪಟುಗಳಿದ್ದಾರೆ ಜೀವನಾಡಿಯಾಗಿರುವ ಹಾಕಿ, ಅಥ್ಲೆಟಿಕ್ಸ್, ಕ್ರಿಕೆಟ್, ಟೆನ್ನಿಸ್, ಫುಟ್ಬಾಲ್, ಸ್ಕ್ವಾಶ್,ಬಿಲ್ಲಿಯರ್ಡ್ಸ್ ಹೀಗೆ ಒಂದಾ ಎರಡಾ… ಹೀಗೆ ತನ್ನ ಚಿಕ್ಕವಯಸಿನಲ್ಲೇ ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಉದ್ದಗಲಕ್ಕೂ ಆಡಿ ರಾಷ್ಟ್ರೀಯ ಮಟ್ಟಕ್ಕೆ ಏರಿರುವ ನಮ್ಮ ಪುಟ್ಟ ಗೌರಿ ಕುಡೆಕಲ್ ಸುರಕ್ಷಾ

ಪ್ರತ್ರಕರ್ತ ಕುಡೆಕಲ್ ಸಂತೋಷ್ ಮತ್ತು ಸವಿತಾ ದಂಪತಿಗಳ ಪುತ್ರಿಯಾಗಿರುವ ಸುರಕ್ಷಾ ಮೊದಲಿನಿಂದಲೂ ಚೂಟಿಯಿಂದಲೇ ಇದ್ದವಳು, ಓಟದಲ್ಲಿ ಮುಂದಿದ್ದ ಸುರಕ್ಷಳಿಗೆ ಹಾಕಿ ಸ್ಟಿಕ್ ಹಿಡಿಸಿದ್ದು ಅಪ್ಪ ಸಂತೋಷ್. ಇದೇ ಅವಳ ಭವಿಷ್ಯದತ್ತ ಕೊಂಡೂಯ್ದಿದೆ.
ಓದಿನೊಂದಿಗೆ ಕ್ರೀಡೆಯನ್ನು ಸಮಾನವಾಗಿ ತೆಗೆದುಕೊಂಡ ಸುರಕ್ಷ 2017 ರಿಂದ ತನ್ನ ಅಸಲಿ ಆಟ ಶಾಲೆ ಮೈದಾನ ಬಿಟ್ಟು ಇತರೆ ಮೈದಾನಕ್ಕೆ ಇಳಿದು ಆಡುವುದಕ್ಕೆ ಆರಂಭಿಸಿದಳು. 2017-2020 ರವರೆಗೆ ಪೂನ್ನಂಪೇಟೆ ಮತ್ತು ಮೈಸೂರಿನಲ್ಲಿ ಸತತ ನಾಲ್ಕು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಹಾಕಿ ಕೊಡಗು ತಂಡ ಪ್ರತಿನಿಸಿದ್ದಾಳೆ ಸುರಕ್ಷಾ. ಇದೇ ಅವಧಿಯಲ್ಲಿ 1500,2000,3000 ಮೀಟರ್ ನಲ್ಲಿ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಸೈ ಎನ್ನಿಸಿದ್ದಾಳೆ.


2019-2020 ಸಾಲಿನಲ್ಲಿ ತೊಡಗಿಸಿಕೊಂಡಿದ್ದಾಳೆ ಹಾಕಿಯಲ್ಲಿ ಮುನ್ನಡೆದರೆ, 2019-2019 ರಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದಲ್ಲಿ ತಂಡವನ್ನು ಪ್ರತಿನಿಸಿದ್ದಾಳೆ. 2018 ರಲ್ಲಿ ಅಸ್ಸಾಂ ಮತ್ತು 2019ರಲ್ಲಿ ಹರಿಯಾಣದಲ್ಲಿ ರಾಷ್ಟ್ರಮಟ್ಟದಲ್ಲಿ ಆಡಿದ್ದು ಇವಳ ಪ್ರಮುಖ ಘಟ್ಟ ಪ್ರಸಕ್ತ ವರ್ಷದಲ್ಲಿ ನಿಟ್ಟೆಯಲ್ಲಿ ನಡೆದ ಪಂದ್ಯಾವಳಿಯಲ್ಲೂ ತಂಡವನ್ನು ಪ್ರತಿನಿಧಿಸಿದ್ದಾಳೆ. ಸುರಕ್ಷಳ ಮತ್ತೊಂದು ಸಾಧನೆ ಅಂದ್ರೆ ಚಾಮುಂಡಿ ಬೆಟ್ಟ ಏರಿರುವುದು. 300 ಸ್ಪರ್ಧಿ,1200 ಮೆಟ್ಟಿಲು ಏರುವ ಸ್ಪರ್ಧೆಯಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದುಕೊಂಡಿದ್ದಾಳೆ.

ಈಕೆಯ ಕ್ರೀಡಾ ಸ್ಪೂರ್ತಿ ತಿಳಿದು ಪೋಷಕರು ಕ್ರೀಡಾ ಶಾಲೆಯಲ್ಲೇ ಇರಿಸಿ ಪ್ರೋತ್ಸಾಹಿಸಿದ್ದಾರೆ. ಸದ್ಯಕ್ಕೆ ಈಕೆ ಮೈಸೂರು ಕ್ರೀಡಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಮೂಲತಃ ಮಡಿಕೇರಿ ತಾಲ್ಲೂಕು ಹೆಮ್ಮೆತಾಳುವಿನವರಾಗಿದ್ದು, 2018ರ ಭೂಕುಸಿತದಲ್ಲಿ ಮನೆ, ಜಾಗ ಕಳೆದುಕೊಂಡಿದ್ದು ಸದ್ಯ ಇವಳ ಪೋಷಕರು ಮಡಿಕೇರಿಯಲ್ಲಿ ನೆಲೆಸಿದ್ದಾರೆ. ಈಕೆಯ ಸಹೋದರ ನಿಹಾಲ್ ಏನು ಕಡಿಮೆ ಇಲ್ಲ. ಸಣ್ಣ ವಯಸ್ಸಿನಲ್ಲೇ ಅಕ್ಕನಂತೆ ಕ್ರೀಡೆ, ಕಲೆ ನೃತ್ಯ ಅಂತಾ ತೊಡಗಿಸಿಕೊಂಡಿದ್ದಾನೆ.

ಸುರಕ್ಷಾ ಕ್ರೀಡೆ ಮಾತ್ರವಲ್ಲ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದೆ ಇದ್ದಾಳೆ ಗೌಡ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವು ವೇದಿಕೆಯಲ್ಲಿ ಪಾಲ್ಗೊಂಡಿದ್ದಾಳೆ.ಒಟ್ಟಿನಲ್ಲಿ ಸುರಕ್ಷಾ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಕೆ.