fbpx

ಒತ್ತುವರಿಯಿಂದ ತಾವರೆಯಿಲ್ಲದ ಕೆರೆಯ ಸರ್ವೆ ಪರಿಶೀಲನೆ!

ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಐತಿಹಾಸಿಕ ತಾವರೆಕೆರೆ ಒತ್ತುವರಿ ಹಿನ್ನಲೆಯಲ್ಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ ವಕೀಲ ಅಮೃತೇಶ್ ತನ್ನ ಸಮ್ಮುಖದಲ್ಲೇ ಸರ್ವೇ ಕಾರ್ಯಕ್ಕೆ ಸಲ್ಲಿಸಿದ ಮೇಲ್ಮನವಿ ಹಿನ್ನಲೆ ಇಂದು ಈ ಹಿಂದೆಯೇ ನಡೆಸಿದ 3.80 ಏಕರೆಯ ಸರ್ವೆ ಕಾರ್ಯವನ್ನು ವೀಕ್ಷಣೆ ಮಾಡಲಾಯಿತು.

ಬಫರ್ ಝೋನ್ ನಲ್ಲಿ ಒತ್ತುವರಿಯಾಗಿರುವ ರಾಷ್ಟ್ರೀಯ ಹೆದ್ದಾರಿ 275, ಕೆರೆಯಿಂದ ನೀರು ಹೊರ ಹೋಗುವ ಪ್ರದೇಶ, ಅಂದಾಜು 7 ಏಕರೆಯಷ್ಟು ಇದ್ದ ಗೋಂದಿ ಬಸವನಳ್ಳಿ ಮೂಲಕ ಹರಿದು ಬರುವ ತೋಡಿನ ಪ್ರದೇಶ,ಅಕ್ರಮ ರಸ್ತೆ ಖಾಸಗಿ ಲೇಔಟ್,ಟಿಂಬರ್ ಮಿಲ್,ಖಾಸಗಿ ಕೃಷಿ ಜಮೀನು ಸೇರಿದಂತೆ ವಿದ್ಯಾಸಂಸ್ಥೆಯಲ್ಲಿನ ಒತ್ತುವರಿ,ಮಳಿಗೆ ಕಟ್ಟಡ ಮತ್ತು ರಸ್ತೆಯ ಮತ್ತೊಂದು ಬದಿಯಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಗಳಲ್ಲಿ ಗುರುತಿಸುವಿಕೆ ಪ್ರದೇಶಗಳನ್ನು ವೀಕ್ಷಣೆ ಮಾಡಲಾಗಿದ್ದು ಮತ್ತು ಸರ್ವೆ ಕಾರ್ಯ ಬಹುತೇಕ ಅಚ್ಚುಕಟ್ಟಾಗಿ ನಡೆದಿದೆ ಎಂದು ದೂರುದಾರ ಅಮೃತೇಶ್ ಅಭಿಪ್ರಾಯ ಹಂಚಿಕೊಂಡರು.

error: Content is protected !!