ಒಟ್ಟಾಗಿ ಕೆಲಸ ಮಾಡೋಣ: ಭಗವಂತನಿಗೆ ನಮೋ ಕರೆ

ನವದೆಹಲಿ: ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಪ್ ಪಕ್ಷದ ಭಗವಂತ್ ಮಾನ್ ಪ್ರಮಾಣ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ, ಮಾನ್ ಅವರನ್ನು ಅಭಿನಂದಿಸಿದ್ದಾರೆ. ಪಂಜಾಬ್ ರಾಜ್ಯದ ಅಭಿವೃದ್ಧಿಗೆ ಜೊತೆಯಾಗಿ ಕೆಲಸ ಮಾಡೋಣ ಎಂದು ಅವರು ಕರೆ ನೀಡಿದ್ದಾರೆ.

ನೂತನವಾಗಿ ಆಯ್ಕೆಯಾದ ಆಪ್ ಶಾಸಕರು, ದೆಹಲಿ ಸಿ.ಎಂ ಆಪ್ ನಾಯಕ ಅರವಿಂದ್ ಕೇಜ್ರಿವಾಲ್, ಆಪ್ ನಾಯಕ, ದೆಹಲಿ ರಾಜ್ಯ ಸಚಿವ ಮನೀಶ್ ಸಿಸೋಡಿಯಾ ಸಮ್ಮುಖದಲ್ಲಿ ಮನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಾನ್ ಅವರಿಗೆ ಕೇಂದ್ರ ಬಿಜೆಪಿ ಸರ್ಕಾರ ಎಲ್ಲಾ ಬಗೆಯ ಸಹಕಾರ ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷ 117 ಕ್ಷೇತ್ರಗಳಲ್ಲಿ 92 ಸೀಟುಗಳನ್ನು ಗೆದ್ದುಕೊಂಡು ಜಯಭೇರಿ ಬಾರಿಸಿತ್ತು.

error: Content is protected !!