fbpx

ಒಂದು ಫ್ಯಾಮಿಲಿ ಕಾರು,ಆರು ಗೋವು:ಪೋಲಿಸ್ ಫೈರಿಂಗ್

ಈ ಸುದ್ದಿ ಅಚ್ಚರಿಯಾದರೂ ಸತ್ಯ, ಕೆಲವು ತಿಂಗಳ ಹಿಂದೆ ಕೊಡಗಿನ ಸಿದ್ದಾಪುರದ ವ್ಯಾಪ್ತಿಯಲ್ಲಿ ಮಾರುತಿ 800 ಕಾರಿನಲ್ಲಿ 2 ಗೋವುಗಳನ್ನು ಸಾಗಿಸಿ ಸಿಕ್ಕಿ ಬಿದ್ದಿರುವುದಕ್ಕೆ ಅಚ್ಚರಿ ಪಟ್ಟ ಜಿಲ್ಲೆಯ ಜನತೆ ನಾಲ್ಕು ಮಂದಿ ಪ್ರಯಾಣಿಕರು ಸರಿಯಾಗಿ ಕೂತು ಪ್ರಯಾಣಿಸುವಂತ ಪುಟ್ಟದಾದ ರಿಟ್ಸ್ ಕಾರಿನಲ್ಲಿ 6 ದನವನ್ನು ಕಸಾಯಿಖಾನೆಗೆ ಸಾಗಿಸುವ ವೇಳೆ ಅನುಮಾನಗೊಂಡು ಪೋಲಿಸರು ಗಾಳಿಯಲ್ಲಿ ಗುಂಡು ಹಾರಿಸಿ ಜಾನುವಾರುಗಳನ್ನು ಬಚಾವ್ ಮಾಡಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ. ಇಲ್ಲಿನ ಶಿರ್ತಾಡಿ ಬಳಿಯ ಔದಾಲ್ ಎಂಬಲ್ಲಿ ಪೋಲಿಸರು ಪ್ಯಾಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಕಾರೊಂದು ಏಕಾಏಕಿ ಪೋಲಿಸ್ ಜೀಪಿನತ್ತ ನುಗ್ಗಿ ಬಂದಿದ್ದು ಅನುಮಾನಗೊಂಡ ಪೋಲಿಸರು ಕಾರನ್ನು ಬೆನ್ನಟ್ಟಿದ ಸಂದರ್ಭ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಶಬ್ದ ಕೇಳಿ ಕಾರನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿ ಇಬ್ಬರು ಗೋ ಕಳ್ಳರು ಪರಾರಿಯಾಗಿದ್ದು ಕಾರು ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!