ಒಂದು ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್ ಮಿತಿ: ಗೃಹ ಬಳಕೆ ಸಿಲಿಂಡರಿಗೆ ಪಡಿತರ ಜಾರಿಗೊಳಿಸುವ ಚಿಂತನೆ
ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆ ದ್ರವೀಕೃತ ಪೆಟ್ರೋಲಿಯಂ ಅನಿಲದ ಬಳಕೆದಾರರು ಅಂದರೆ, ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗಳಿಗೆ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ.
ಈ ವರದಿಗಳ ಪ್ರಕಾರ, ಎಲ್ಪಿಜಿ ಸಿಲಿಂಡರ್ ಅನ್ನು ಹೊಂದಿರುವ ಬಳಕೆದಾರರು ಒಂದು ತಿಂಗಳಿನಲ್ಲಿ ಎರಡು ಸಿಲಿಂಡರ್ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಒಂದು ವರ್ಷದಲ್ಲಿ 15ಕ್ಕಿಂತ ಹೆಚ್ಚು ಸಿಲಿಂಡರ್ ಅನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ದೇಶದಲ್ಲಿ ಇದುವರೆಗೂ ಸಬ್ಸಿಡಿ ರಹಿತ ಸಂಪರ್ಕವನ್ನು ಹೊಂದಿರುವ ಗ್ರಾಹಕರು ತಮ್ಮಿಷ್ಟದಂತೆ ಗ್ಯಾಸ್ ಭರ್ತಿ ಮಾಡಿಸಿಕೊಳ್ಳಬಹುದಿತ್ತು. ಆದರೆ ಹೀಗೆ ಪಡೆದುಕೊಳ್ಳುವ ಸಿಲಿಂಡರ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಸಾಲು ಸಾಲು ದೂರುಗಳು ಕೇಳಿ ಬಂದಿದ್ದವು. ಆದ್ದರಿಂದ ಗ್ಯಾಸ್ ಭರ್ತಿಗೆ ಒಂದು ಮಿತಿಯನ್ನು ನಿಗದಿಪಡಿಸುವುದಕ್ಕೆ ಪೂರೈಕೆದಾರರು ನಿರ್ಧರಿಸಿದ್ದಾರೆ.
ಹೊಸ ಕಾನೂನು ಹೇಳುವುದೇನು?:
ಭಾರತದಲ್ಲಿ ಹೊಸ ಕಾನೂನಿನ ಪ್ರಕಾರ, ಸಬ್ಸಿಡಿ ಹೊಂದಿರುವ ಗೃಹ ಬಳಕೆಯ ಗ್ಯಾಸ್ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಗ್ರಾಹಕರು ಒಂದು ವರ್ಷಕ್ಕೆ ಕೇವಲ 12 ಸಿಲಿಂಡರ್ಗಳನ್ನು ಪಡೆದುಕೊಳ್ಳಲು ಅರ್ಹರಾಗುತ್ತಾರೆ. ಹೆಚ್ಚುವರಿ ಸಿಲಿಂಡರ್ ಅಗತ್ಯವಿದ್ದಲ್ಲಿ ಅವರು ಸಬ್ಸಿಡಿ ರಹಿತ ಸಿಲಿಂಡರ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇನ್ನು ವಿತರಕರ ಪ್ರಕಾರ, ಒಂದು ಸಿಲಿಂಡರ್ ಸಂಪರ್ಕದ ಅಡಿಯಲ್ಲಿ ಒಂದು ತಿಂಗಳಲ್ಲಿ ಎರಡು ಸಿಲಿಂಡರ್ಗಳನ್ನು ಮಾತ್ರ ತೆಗೆದುಕೊಳ್ಳಬಹುದು ಮತ್ತು ಯಾವುದೇ ಸಂದರ್ಭದಲ್ಲೂ 12ರ ಮಿತಿಯನ್ನು ಹೆಚ್ಚಿಸಲಾಗುವುದಿಲ್ಲ.
ಗ್ರಾಹಕರು ಹೆಚ್ಚುವರಿ ಗ್ಯಾಸ್ ಅಗತ್ಯವನ್ನು ಹೊಂದಿದ್ದರೆ, ಅವರು ಹೆಚ್ಚುವರಿ ಅವಶ್ಯಕತೆಯ ಪುರಾವೆಯನ್ನು ತೋರಿಸಬೇಕಾಗುತ್ತದೆ. ಆಗ ಮಾತ್ರ ಬಳಕೆದಾರರಿಗೆ ಮಿತಿಯನ್ನು ಹೆಚ್ಚಿಸಬಹುದು ಎಂದು ಆಗ್ರಾ ವಿಭಾಗದ ಇಂಡೇನ್ ವಿತರಕರ ಸಂಘದ ಅಧ್ಯಕ್ಷ ವಿಪುಲ್ ಪುರೋಹಿತ್ ಹೇಳಿದ್ದಾರೆ.