ಒಂಟಿ ಆನೆ ಸೆರೆಗೆ ಸರ್ಕಾರಕ್ಕೆ ಪ್ರಸ್ಥಾವನೆ

ಕೊಡಗು: ಒಂದಲ್ಲಾ ಒಂದು ರೀತಿಯಲ್ಲಿ ಉಪಟಳ ನೀಡುತ್ತಾ,ಇಬ್ಬರನ್ನು ಬಲಿ ತೆಗೆದುಕೊಂಡಿದೆಯಲ್ಲದೆ ಎರಡು ದಿನದ ಹಿಂದೆಯಷ್ಟೇ ಕಾವಲುಗಾರನ ಮೇಲೆ ದಾಳಿ ಮಾಡುತ್ತಿರುವ ಒಂಟಿ ಸಲಗವನ್ನು ಪತ್ತೆ ಹಚ್ಚಿ ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿದ್ದಾರೆ.ಈಗಾಗಲೇ ಅರಣ್ಯ ಇಲಾಖೆ ಒಂಟಿಸಲಗದ ಚಲನವಲನ ಗಮನಿಸುತ್ತಿದ್ದು ಸರ್ಕಾರದಿಂದ ಅನುಮತಿ ದೊರೆಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿ,ಸೆರೆ ಹಿಡಿದು ಬಂಡೀಪುರದ ಸಾಕಾನೆ ಶಿಬಿರಕ್ಕೆ ಬಿಡುವ ಸಾಧ್ಯತೆಯಿದೆ.

ಇಲ್ಲಿನ ಕಾಫಿ ತೋಟವನ್ನೇ ಮನೆ ಮಾಡಿಕೊಂಡು ಸಂತಾನಭಿವೃದ್ದಿ ನಡೆಸುತ್ತಿರುವ ಕಾಡಾನೆಗಳು ಮರಿಗಳನ್ನು ಬಿಟ್ಟು ಬೇರೆಡೆಯಲ್ಲೂ ಹೋಗದೆ ಇರುವುದು ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

error: Content is protected !!