ಐರಾವತ ಬಸ್ ಅಪಘಾತ, ಚಾಲಕ ಸಾವು

ಕೊಡಗು: ಜಿಲ್ಲೆಯ ಗಡಿಯಲ್ಲಿ ಐರಾವತ ಬಸ್ ಅಪಘಾತಕ್ಕೆ ಒಳಗಾಗಿ ಅನಾಹುತ ಸಂಭವಿಸಿದೆ.

ಅಪಘಾತದಲ್ಲಿ ಬೆಂಗಳೂರು ಮೂಲದ ಚಾಲಕ ಸ್ವಾಮಿ (40) ಸಾವನ್ನಪ್ಪಿದ್ದು, ಕೊಡಗಿನ ಗಡಿಭಾಗದ ಪೆರುಂಬಾಡಿಯಲ್ಲಿ ನಡೆದ ದುರ್ಘಟನೆ ಇದಾಗಿದೆ. ಬ್ರೇಕ್ ವೈಫಲ್ಯದಿಂದ ನಡೆದ ಅಚಾನಕ್ ಅಚಾತುರ್ಯದಲ್ಲಿ ರಭಸವಾಗಿ ಸ್ಟೇರಿಂಗ್ ನಡುವೆ ಸಿಲುಕಿಕೊಂಡ ಚಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.