ಐತಿಹಾಸಿಕ ವಿರಾಜಪೇಟೆ ಗಣೇಶ ಉತ್ಸವ: ಸಮಿತಿ ಸಭೆ

ಮಡಿಕೇರಿ ದಸರಾಕ್ಕಿಂತ ವಿಜೃಂಭಣೆಯಿಂದ ನಡೆಯುವ ವಿರಾಜಪೇಟೆಯ ಗೌರಿಗಣೇಶ ಉತ್ಸವಕ್ಕೆ ಮೂರು ವರ್ಷದ ಬಳಿಕ ಮತ್ತೆ ಮೆರುಗು ನೀಡಲು ಉತ್ಸವ ಸಮಿತಿ ನಿರ್ಧರಿಸಿದೆ.

ರಾತ್ರಿಯಿಡೀ ಬೆಳಗಿನವರೆಗೆ ನಡೆಯುವ ಈ ತೇರು ಉತ್ಸವ ಧ್ವನಿವರ್ಧಕ ಬಳಕೆ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ನಿಯಮವನ್ನು ಸಡಿಲಿಕೆ ಮಾಡಲು ಸಮಿತಿ ಅಧ್ಯಕ್ಷ ಸಾಯಿನಾಥ್ ನಾಯಕ್ ಶಾಸಕ ಕೆ.ಜಿ ಬೋಪಯ್ಯರಿಗೆ ಮನವಿ ಮಾಡಿದ್ದು,ಡಿ.ಜೆ ನಿರ್ದಿಷ್ಟ ಸಮಯದ ನಂತರ ಬದಲಾಗಿ ಸಾಂಪ್ರದಾಯಿಕ ವಾದ್ಯಗಳನ್ನು ಬಳಸುವಂತೆ ಸೂಚಿಸಿದ್ದು, ಉತ್ಸವಕ್ಕೆ ಬೇಕಾದ ವಿದ್ಯುತ್ ವ್ಯವಸ್ಥೆ, ರಸ್ತೆ ಗುಂಡಿ ಮುಚ್ಚುವುದು, ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಶಾಸಕ ಬೋಪಯ್ಯ ಸೂಚಿಸಿದರು.

error: Content is protected !!