fbpx

ಐಗೂರು ಶಾಲೆ ಮೈದಾನದಲ್ಲಿ ಏಕಾಏಕಿ ಲ್ಯಾಂಡ್ ಆದ ಹೆಲಿಕಾಪ್ಟರ್!

ಪ್ರವಾಸಿಗರೊಬ್ಬರಿಗೆ ಸೇರಿದ ಖಾಸಗಿ ಹೆಲಿಕಾಪ್ಟರ್ ದಟ್ಟ ಮಂಜಿನ ಪರಿಣಾಮ ಮಡಿಕೇರಿಯಲ್ಲಿ ಇಳಿಸಲು ಮತ್ತು ಹಾರಲಾಗದೆ, ಸೋಮವಾರಪೇಟೆಯ ಐಗೂರು ಶಾಲೆ ಮೈದಾನದಲ್ಲಿ ಇಳಿದ ಘಟನೆ ನಡೆದಿದೆ.

ಮಡಿಕೇರಿಗೆ ಪ್ರವಾಸ ಬಂದಿದ್ದ ಕುಟುಂಬ ನೀಲ ಕುರುಂಜಿ ವೀಕ್ಷಣೆಗೆಂದು ಖಾಸಗಿ ಹೆಲಿಕಾಪ್ಟರ್ ನನ್ನು ಕರೆಸಿದ್ದರು ಎನ್ನಲಾಗುತ್ತಿದ್ದು, ಲ್ಯಾಂಡ್ ಆಗಲು ತೊಂದರೆಯಾದ ಪರಿಣಾಮ ಪ್ರವಾಸಿಗರು ಕಾರಿನಲ್ಲಿ ಐಗೂರಿಗೆ ತೆರಳಿ ಅಲ್ಲಿಂದ ಬೆಂಗಳೂರಿನತ್ತ ತೆರಳಿದೆ. ಆದರೆ ಈ ಹೆಲಿಕಾಪ್ಟರ್ ಕರೆಸಿಕೊಂಡವರ್ಯಾರು ಎನ್ನುವುದೇ ಇದೀಗ ಅಚ್ಚರಿ ಮೂಡಿಸಿದರೆ! ಏಕಾಏಕಿ ಹೆಲಿಕಾಪ್ಟರ್ ಕಂಡು ಐಗೂರು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

error: Content is protected !!