ಏ.15 ರಂದು ಅರೆಭಾಷಿಗ ಗೌಡ ಜನಾಂಗದ ವಧು-ವರರ ಸಮಾವೇಶ

ಮಡಿಕೇರಿ ಏ.1 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಗೌಡ ಜನಾಂಗದ ಬಾಂಧವರ (ಅರೆಭಾಷಿಗ) ವಧು ವರರ ಸಮಾವೇಶ 0.15 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೋರನ ಸಿ.ವಿಶ್ವನಾಥ್ ತಿಳಿಸಿದ್ದಾರೆ. ಅಂದು ಬೆಳಗ್ಗೆ 9.30 ಗಂಟೆಗೆ ನಗರದ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಆಸಕ್ತರು ತಮ್ಮ ಭಾವಚಿತ್ರ ಹಾಗೂ ಇತರ ಎಲ್ಲಾ ಮಾಹಿತಿಗಳೊಂದಿಗೆ ಭಾಗವಹಿಸುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9449086589, 9739495381, 9449476005 ನ್ನು ಸಂಪರ್ಕಿಸಬಹುದಾಗಿದೆ.

error: Content is protected !!